ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು 1919ರ ಜುಲೈ 18 ರಂದು. ಇವರ ತಂದೆಯವರು ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರು ಮತ್ತು ತಾಯಿ ಕೆಂಪು ಚೆಲುವಾಜಮ್ಮಣ್ಣಿಯವರು ( ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ. ಸಿ ಜನರಲ್ ಆಸ್ಪತ್ರೆಯು ಇವರ ಸವಿನೆನಪಿನ ಗೌರವ ಪೂವ೯ಕವಾದ ಸ್ಮರಣೆಯ ಹೆಮ್ಮೆಯ ಪ್ರತೀಕವು ಆಗಿರುತ್ತದೆ – ಕೆಂಪು ಚೆಲುವಾಜಮ್ಮಣ್ಣಿ ಸಾವ೯ಜನಿಕ ಆಸ್ಪತ್ರೆ – ಕೆ. ಸಿ ಜನರಲ್ ಆಸ್ಪತ್ರೆ ) ಆಗಿರುತ್ತಾರೆ.
ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ ಅಭಿರುಚಿಯನ್ನೂ ಉಂಟು ಮಾಡಿದವರು. ರಾಜಷಿ೯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ಸ್ವಂತ ದೊಡ್ಡಪ್ಪನವರು ಆಗಿರುತ್ತಾರೆ.
ಪ್ರಾರಂಭಿಕ ಶಿಕ್ಷಣ ನಡೆದದ್ದು ರಾಜಮನೆತನದ ವಿಶೇಷ ಶಾಲೆಯಲ್ಲಿ ಆಗಿರುತ್ತದೆ. ತಮಗೆ ಸಂತಾನವಿಲ್ಲದಿದ್ದುದರಿಂದ ತಮ್ಮ ಕಿರಿಯ ಸಹೋದರರಾದ ನರಸಿಂಹರಾಜ ಒಡೆಯರವರ ಪುತ್ರರಾದ ಇವರನ್ನು ಪಟ್ಟಕ್ಕೇರಿಸುವ ಸಲುವಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರವರು ಇವರಿಗೆ ಇನ್ನೂ 15-16 ವರ್ಷ ವಯಸ್ಸಿದ್ದಾಗಲೇ ಮೈಸೂರಿನ ಲೋಕರಂಜನ ಮಹಲ್ ನಲ್ಲಿ ಒಂದು ವಿಶೇಷವಾದ ಶಾಲೆಯನ್ನು ಏರ್ಪಡಿಸಿ ಶಿಕ್ಷಣವನ್ನು ಕೊಡಿಸಿದರು. ಮುಂದೆ ಇವರು ತಮ್ಮ 19ನೆಯ ವಯಸ್ಸಿನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ. ಪದವಿಯನ್ನು ಪಡೆದರು (1938). ಕನ್ನಡ – ಇಂಗ್ಲಿಷ್ ಭಾಷೆಗಳ ಜೊತೆಗೆ ರಾಜನೀತಿ ಮತ್ತು ಅರ್ಥಶಾಸ್ತ್ರಗಳನ್ನು ಅಭ್ಯಸಿಸಿದರು. ಉತ್ತಮ ಪಾಂಡಿತ್ಯಕ್ಕೆ ಮೀಸಲಾದ ಐದು ಬಹುಮಾನಗಳು ಸುವರ್ಣಪದಕಗಳೊಂದಿಗೆ ಇವರಿಗೆ ಲಬಿಸಿದವು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಿಸ್ಟಾರಿಕಲ್ ಅಸೋಸಿಯೇಷನ್ನಿನ ಗೌರವಾಧ್ಯಕ್ಷರೂ ಕೂಡ ಆಗಿದ್ದರು.
ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಅರಮನೆಯ ಆವರಣದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವ , ಯಾವುದೋ ಶಿಫಾರಸ್ಸಿನ ಮೇಲೆ ಅರಮನೆ ದರ್ಶನ, ಗ್ಯಾಲರಿಯಲ್ಲಿ ಕುಳಿತು ದರ್ಬಾರನ್ನು ನೋಡುವುದು ಇವೆಲ್ಲವುಗಳು ಜನರಿಗೆ ತುಂಬಾ ಖುಷಿಯನ್ನು ಕೊಡುತ್ತಿದ್ದವು.
ಶ್ರೀ ಜಯಜಾಮರಾಜೇಂದ್ರ ಒಡೆಯರ್ ರವರು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ತಮ್ಮ ಅಮೋಘ ಮಹತ್ವದ ಕೊಡುಗೆಯನ್ನು ನೀಡಿರುವ , ಎಂದಿಗೂ ಕೂಡ ಮರೆಯಲಾಗದ ಮಹಾನುಭಾವರಾದ ರಾಜಷಿ೯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನದ ನಂತರದಲ್ಲಿ 1940 ರಿಂದ 1950 ರವರೆಗೆ ಸಂಸ್ಥಾನದ ಅರಸರಾಗಿ ತಮ್ಮ ರಾಜ್ಯಭಾರವನ್ನು ನಡೆಸಿದರು. ಭಾರತವು ಬ್ರಿಟಿಷರಿಂದ ತನ್ನ ಸ್ವಾತಂತ್ರ್ಯ ವನ್ನು ಗಳಿಸಿದ ತದನಂತರದಲ್ಲಿ ಸಂಸ್ಥಾನದ ರಾಜಪ್ರಭುತ್ವವು ಕೊನೆಗೊಂಡಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದೆ ರಾಜಪ್ರಮುಖರಾಗಿ , ಕರ್ನಾಟಕದ ರಾಜ್ಯಪಾಲರಾಗಿ ಮತ್ತು ಮದ್ರಾಸಿನಲ್ಲಿ ಎರಡು ವರ್ಷಗಳ ಕಾಲ ರಾಜ್ಯಪಾಲರಾಗಿ , ಹೀಗೆ 1966 ರ ವರ್ಷದವರೆಗೆ ಅವರು ರಾಜರಾಗದಿದ್ದರೂ , ಹಲವು ಅಧಿಕಾರಗಳ ಸ್ಥಾನದ ಗೌರವಯುತವಾದ ರಾಜ ಮರ್ಯಾದೆಯನ್ನು ಪಡೆದಿದ್ದರು.
ಸಂಗೀತದಲ್ಲಿ ಮೈಸೂರಿನ ಅರಸರಿಗೆ ಉತ್ಕಟವಾದ ಪ್ರೀತಿಯು ಇತ್ತು ಎಂಬುದು ಸರ್ವವೇದ್ಯವು ಆಗಿರುತ್ತದೆ. ನಮ್ಮ ನಾಡಿನಲ್ಲಿ ಸಂಗೀತಗಾರರಿಗೆ ಸಿಕ್ಕ ಮಹತ್ವದ ಗೌರವಗಳಿಗೆ ಮೈಸೂರಿನ ಅರಸರು ಎಂದೂ ಕೂಡ ಅಭಿನಂದಾರ್ಹರು ಆಗಿರುತ್ತಾರೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪಾಶ್ಚಿಮಾತ್ಯ ಮತ್ತು ಕರ್ನಾಟಕ ಸಂಗೀತದ ಪರಿಚಯವಿತ್ತು. ಅವರ ರಚನೆಗಳೆಂದು ಹಲವು ಕೃತಿಗಳು ಜನಪ್ರಿಯತೆಯನ್ನು ಪಡೆದಿರುತ್ತವೆ.
ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಒಂದು ದಿನ ಇದ್ದಕ್ಕಿದ್ದಂತೆ ರಾಜಮಹಾರಾಜರಿಗೆ ಕೊಡುತ್ತಿದ್ದ ರಾಜಧನವನ್ನು ನಿಲ್ಲಿಸು ವವರೆಗೆ ನಡೆಸುತ್ತಿದ್ದ ದಸರಾ ದರ್ಬಾರು, ಅಂಬಾರಿಯ ಮೆರವಣಿಗೆಯನ್ನು ನೋಡಿದವರುಗಳೇ ಭಾಗ್ಯವಂತರು ಆಗಿರುತ್ತಾರೆ.
ಇಂತಹ ಮಹಾರಾಜರು ನಿಧನರಾಗಿದ್ದು ಸೆಪ್ಟೆಂಬರ್ 23 , 1974 ರಲ್ಲಿ. ಹೀಗೆ ನಾವುಗಳು ಕಂಡ ಮೈಸೂರು ಸಂಸ್ಥಾನದ ಕಟ್ಟಕಡೆಯ ಅರಸರಾಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಮಸ್ತ ಎಲ್ಲರ ನೆನಪಿನಲ್ಲಿ ಉಳಿಯು ತ್ತಾರೆ. ಇಂದು ಅವರ ಜನ್ಮದಿನದ ಸಂಸ್ಮರಣೆಯು ಆಗಿರುತ್ತದೆ.
————————————
ಮಾಹಿತಿಗಳ ಸಂಗ್ರಹ ಮತ್ತು ಲೇಖನ : ವಿ. ಪಿ ಆರಾಧ್ಯ – ಮೈಸೂರು
———————————————————-
