ಗಣಿತ ಪ್ರಪಂಚಕ್ಕೆ ತನ್ನದೇ ಶ್ರೇಷ್ಠತಮ ವಾದ ಕೊಡುಗೆಯನ್ನು ನೀಡಿದಂತೆ , ವಿಶ್ವವನ್ನೇ ಬೆರಗುಗೊಳಿಸಿದ ಹೆಮ್ಮೆಯ ಭಾರತೀಯ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಸಂಸ್ಮರಣಾರ್ಥವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸ ಲಾಗುತ್ತದೆ.
ಅನಂತದ ( Infinity ) ಅಥ೯ವು ಆ ಗಣಿತ ಗಾರುಡಿಗನಿಗೆ ಗೊತ್ತಿತ್ತು – ಸುಮಾರು ಮೂವತ್ತೊಂದು ವರ್ಷದ ಹಿಂದೆ ಆ ಹೆಸರಿನ ಪುಸ್ತಕವು ಪ್ರಕಟವಾಗಿತ್ತು… ಅಮೆರಿಕಾದ ವಿಜ್ಞಾನ ಬರಹಗಾರ ರಾಬರ್ಟ್ ಕೆನ್ನಿಗೆಲ್ ಬರೆದ ಆ ಪುಸ್ತಕವನ್ನು ಆಧರಿಸಿಯೇ ಆರು ವರ್ಷದ ಹಿಂದೆ ಮ್ಯಾಥ್ಯೂ ಬ್ರೌನ್ ಎಂಬಾತ ನಿರ್ದೇಶಿಸಿದ ಆಂಗ್ಲ ಭಾಷೆಯ ಚಿತ್ರವು ಬಂದಿತ್ತು… ” The Man who knew Infinity” ಎಂದು ಅದರ ಹೆಸರು – ಅನಂತವನ್ನು ( Infinity) ಅರಿತವನು ಎಂಬ ಅರ್ಥದ ಆ ಚಿತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು – ಏಕೆಂದರೆ ಮೊದಲನೆಯದಾಗಿ, ಆ ಚಿತ್ರವು ಭಾರತ ದೇಶವು ಕಂಡ ಮಹಾನ್ ಗಣಿತ ವಿಜ್ಞಾನಿ ಶ್ರೀನಿವಾಸ ರಾಮಾನುಜನ್ ರವರನ್ನು ಕುರಿತ ಚಿತ್ರವಾಗಿತ್ತು… ಎರಡನೆಯದಾಗಿ, ಅನಂತ ಸತ್ಯದ ನಿರಂತರ ಅನ್ವೇಷಣೆಯೂ ಕೂಡ ಕುತೂಹಲವೇ ಆಗಿರುತ್ತದೆ ….!
ವೇದಗಳು ಅಪೌರುಷೇಯ ಎನ್ನಲಾಗುತ್ತದೆ… ಅಂದರೆ ಅದನ್ನು ರಚಿಸಿದವರು ಮನುಷ್ಯರಲ್ಲ ಅನ್ನುವುದು ಅದರ ಅರ್ಥ… ಇವತ್ತಿನ ವಿಚಾರ ವ್ಯಾಧಿಗಳು ಈ ಮಾತನ್ನು ಲಘುವಾಗಿ ತಳ್ಳಿ ಹಾಕಬಹುದು… ಆದರೆ ಶ್ರೀನಿವಾಸ ರಾಮಾನುಜನ್ ಎಂಬ ಈ ಅಸಾಧಾರಣ ವ್ಯಕ್ತಿಯ ಜೀವನದ ಬಗ್ಗೆ ತಿಳಿದುಕೊಂಡ ಯಾರೇ ಆದರೂ ವೇದಗಳು ಮನುಷ್ಯ ರಚಿತವಲ್ಲ, ಆ ಮಟ್ಟದ ಜ್ಞಾನ ಮನುಷ್ಯನ ಮಿದುಳಿನಲ್ಲಿ ಹುಟ್ಟಲಾರದು, ಹಾಗಾಗಿ ಇದು ಮನುಷ್ಯ ಮಾತ್ರರಿಂದ ಸೃಷ್ಟಿಯಾದದ್ದಲ್ಲ ಅನ್ನುವ ನಿರ್ಧಾರಕ್ಕೆ ಖಂಡಿತಾ ಬರುತ್ತಾರೆ…
ಇದೇನಿದು ಹಿಂದೂ ಧರ್ಮದ ಮೂಲ ಆಕರವಾದ, ಹತ್ತಾರು ಸಾವಿರ ವರ್ಷಗಳಷ್ಟು ಪ್ರಾಚೀನವಾದ ವೇದಗಳಿಗೂ, ಕೇವಲ ನೂರ ಮೂವತ್ತು ವರ್ಷಗಳ ಹಿಂದೆ ಹುಟ್ಟಿದ್ದ ಈ ಗಣಿತ ಪಂಡಿತನಿಗೂ ಏನು ಸಂಬಂಧ ಅಂತ ನೀವು ಪ್ರಶ್ನಿಸಬಹುದು… ಇದು ನನ್ನ ಸ್ವಂತದ ಆಲೋಚನೆ ಮತ್ತು ನನ್ನದೇ ಆದ ವಿಶ್ಲೇಷಣೆ… ವೇದಗಳನ್ನು ರಚಿಸಿದ್ದು ಮನುಷ್ಯರೇ ಆಗಿರಬಹುದು ….. ಆದರೆ ಆ ಮನುಷ್ಯರಿಗೆ ಅನೂಹ್ಯವಾದಂತಹ ಹೊಳಹುಗಳು, ಕಾಣ್ಕೆಗಳು, ಆಲೋಚನೆಗಳು, ವಿಚಾರಗಳು, ಕಲ್ಪನೆಗಳು ಅದೆಲ್ಲಿಂದ ಸ್ಪುರಣಗೊಳ್ಳುತ್ತದೆ…? ಅವರ ಮೆದುಳಿನಲ್ಲಿ ಅದೆಲ್ಲವೂ ಮೂಡುವುದು ಹೇಗೆ…? ಮನುಷ್ಯನ ಮಿದುಳು ಅದೇನನ್ನು ಪ್ರೋಸೆಸ್ ಮಾಡಬೇಕಿದ್ದರೂ ಅದಕ್ಕೂ ನಮ್ಮ ಕಂಪ್ಯೂಟರ್ ರೀತಿಯೇ input ಗಳು ಬೇಕಲ್ಲ… ಆದರೆ ಅದ್ಯಾವುದೂ ಇಲ್ಲದೆಯೇ ಅತ್ಯಂತ ನವೀನ, ಹೊಚ್ಚ ಹೊಸದಾದ ಆಲೋಚನೆಗಳು ಮಿದುಳಿನ ಪದರಗಳೊಳಗೆ ಸೃಷ್ಟಿಯಾಗುವುದು ಹೇಗೆ? ಇಂಥದೆಲ್ಲ ಪ್ರಶ್ನೆಗಳು ನಿಮ್ಮಲ್ಲೂ ಇದ್ದರೆ…… ಅದಕ್ಕೆಲ್ಲ ನೇರವಾದ ಸ್ಪಷ್ಟವಾದ ಉತ್ತರ ಶ್ರೀನಿವಾಸ ರಾಮಾನುಜನ್ ಮತ್ತವರ ಸಾಧನೆ…!
1887 ರ ಡಿಸೆಂಬರ್ 22 ರಂದು ತಮಿಳುನಾಡು ರಾಜ್ಯದ ಈರೋಡ್ ಪ್ರಾಂತ್ಯದ ಕುಂಭಕೋಣಂ ಸ್ಥಳದಲ್ಲಿನ ಸುಸಂಸ್ಕೃತ ಮತ್ತು ಆ ಕಾಲಘಟ್ಟದಲ್ಲಿನ ಸಂಪ್ರದಾಯಸ್ಥ ಮನೆತನದ ಹಾಗೂ ಬಹಳ ಕಡುಬಡತನದ ಕುಟುಂಬದಲ್ಲಿ ಜನಿಸಿದ್ದ ಶ್ರೀನಿವಾಸ ರಾಮಾನುಜನ್ ಬಾಲ್ಯದಲ್ಲೇ ತುಂಬಾ ವಿಲಕ್ಷಣವಾದ ಹಾಗೂ ಅಸಾಧಾರಣವಾದ , ತಮ್ಮದೇ ಆದಂತಹ ವಿಶೇಷವಾದ ಬುದ್ದಿಮತ್ತೆಯನ್ನು ಹೊಂದಿದ್ದವರು. ಆತನ ಜೊತೆಯಲ್ಲಿದ್ದ ಹುಡುಗರಿಗೆ ರಾಮಾನುಜನ್ ಒಮ್ಮೊಮ್ಮೆ ಏನು ಮಾತಾಡುತ್ತಿದ್ದಾನೆ ಎಂದು ಅರ್ಥವೇ ಆಗುತ್ತಿರಲಿಲ್ಲ. ಆತನನ್ನು ಯಾರೂ ಕೂಡ ಸುಲಭದಲ್ಲಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ವಾದ್ದರಿಂದ ಆತನಿಗೆ ಸರಿಯಾದ ಸ್ನೇಹಿತರೂ ಕೂಡ ಇರಲಿಲ್ಲ… ಹಾಗಾಗಿ ರಾಮಾನುಜನ್ ಗೆ ಶಾಲೆಗೆ ಹೋಗುವುದೆಂದರೇ ಅಜೀಣ೯ವಾಗಿರುತ್ತಿತ್ತು…! ಆತನ ತಂದೆ ರಾಮಾನುಜನ್ ಶಾಲೆಗೆ ಸರಿಯಾಗಿ ಹಾಜರಾಗುವಂತೆ ಮಾಡಲು ಪೊಲೀಸರ ಮೊರೆ ಹೋಗಿದ್ದರು..! ಗೆಳೆಯರಿಲ್ಲದೆ ಅದನ್ನೂ ಕೂಡಾ ಯಾರ ಸಹಾಯವೂ ಇಲ್ಲದೆ ರಾಮಾನುಜನ್ ತಾನೇ ಸ್ವತಃ ಅಧ್ಯಯನವನ್ನು ಮಾಡಿದ್ದೂ ಅಲ್ಲದೆ… ತನ್ನದೇ ಆದ ಕ್ಲಿಷ್ಟವಾದ ಗಣಿತದ ಪ್ರಮೇಯಗಳನ್ನು ರಚಿಸಲು ಶುರುಮಾಡಿದ…. ಆ ಹೊತ್ತಿಗೆ ಆತನಿಗೆ ಜಾಗತಿಕವಾಗಿ ಯಾವೆಲ್ಲ ಗಣಿತ ಶಾಸ್ತ್ರಜ್ಞರು ಏನೆಲ್ಲಾ ಕಂಡು ಹಿಡಿದಿದ್ದರು… ಯಾವೆಲ್ಲ ಸಂಶೋಧನೆಗಳನ್ನು ಮಾಡಿದ್ದರು ಅನ್ನುವ ಮಾಹಿತಿಯೇ ಇರಲಿಲ್ಲ…. ಅದು ಗೂಗಲ್ ದಿನಗಳಲ್ಲವಲ್ಲ..!
ಬಾಲಕ ರಾಮಾನುಜನಿಗೆ ಗಣಿತದ ಕಠಿಣವಾದ ಕ್ಲಿಷ್ಟ ಲೆಕ್ಕಾಚಾರಗಳೆಲ್ಲವೂ ಹೀಗೆ ಸ್ವಾಭಾವಿಕವಾಗಿಯೇ ಹೊಳೆಯುತ್ತಿದ್ದವು… ಕೇವಲ ಹದಿಮೂರನೆಯ ವಯಸ್ಸಿಗೇ ಆತ ಭೂಮಧ್ಯ ರೇಖೆಯ ಒಟ್ಟು ಉದ್ದ ಎಷ್ಟು ಅಂತ ಲೆಕ್ಕ ಹಾಕಿದ್ದನು ..!
ಹದಿನಾರನೆಯ ವಯಸ್ಸಿನಲ್ಲಿ ರಾಮಾನುಜನ್ ಅವರ ಕೈಗೆ ” A Synopsis of Elementary Results in Pure & Applied Mathematics” ಸಿಕ್ಕಿತು. ಇದುವೇ ಅವರ ಜೀವನದ ಮಹತ್ತರ ತಿರುವು ಆಯಿತು…. ಯಾವ ಗುರುಗಳ ಸಹಾಯವೂ ಇಲ್ಲದೆ ಸ್ವಯಂ ಅಧ್ಯಯನವನ್ನು ಮಾಡಿ ಗಣಿತದಲ್ಲಿ ಮೊದಲೇ ಪಾರಂಗತನಾಗಿದ್ದ ರಾಮಾನುಜನ್ ಕೈಗೆ ಜಿ.ಎಸ್ ಕಾರ್ರ್ ರಚಿಸಿದ್ದ ಸುಮಾರು ಐದು ಸಾವಿರ ಗಣಿತ ಪ್ರಮೇಯಗಳಿದ್ದ ಈ ಪುಸ್ತಕದಲ್ಲಿನ ಪ್ರಮೇಯಗಳನ್ನು ಅಭ್ಯಸಿಸ ತೊಡಗಿದ್ದರು. ಅಷ್ಟರಲ್ಲಿ ಆತನಿಗೆ ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ಕಲಿಯಲು ವಿದ್ಯಾರ್ಥಿ ವೇತನವು ದೊರಕಿತು. ಆದರೆ ರಾಮಾನುಜನ್ ಅವರಿಗೆ ಗಣಿತದ ಹುಚ್ಚು ಹಿಡಿದಿತ್ತು…. ಗಣಿತವನ್ನು ಹೊರತು ಪಡಿಸಿದಂತೆ ಅವರಿಗೆ ಬೇರಾವುದೇ ಇತರೆ ವಿಷಯಗಳ ಬಗ್ಗೆ ಯಾವುದೇ ಆಸಕ್ತಿಯೇ ಇರಲಿಲ್ಲ… ಹಾಗಾಗಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದುಕೊಂಡ ರಾಮಾನುಜನ್ ಇತರೆ ಬೇರೆಲ್ಲಾ ವಿಷಯಗಳಲ್ಲಿ ನಪಾಸು ಆಗಿ ತಮ್ಮ ವಿದ್ಯಾರ್ಥಿ ವೇತನವನ್ನು ( scholarship ) ಕಳೆದುಕೊಂಡರು…. !
ಅವರ ತಂದೆ ಬಟ್ಟೆಯಂಗಡಿ ಒಂದರಲ್ಲಿ ಗುಮಾಸ್ತರು ಆಗಿದ್ದರು… ಮನೆಯಲ್ಲಿ ಅದೆಂತಹ ಕಡು ಬಡತನವೆಂದರೆ ಬರೆಯಲು ಪೆನ್-ಪೇಪರ್ ಖರೀದಿಯನ್ನೂ ಮಾಡಲೂ ಕೂಡ ಸಾಧ್ಯವಿರಲಿಲ್ಲ.. ಆದರೆ ರಾಮಾನುಜನ್ ಮೆದುಳಿನ ಪದರು ಪದರುಗಳೊಳಗೂ ಗಣಿತದ ಬೀಜಗಳು ಮೊಳೆಯುತ್ತಿದ್ದವು…. ಅದು ಹೇಗೆ ಯಾಕೆ ಅಂತ ವಿವರಿಸಲು ವಿಜ್ಞಾನಕ್ಕೆಶ ಖಂಡಿತಾ ಸಾಧ್ಯವಾಗುವುದಿಲ್ಲ… ಮೆದುಳಿನಾಳದಲ್ಲಿ ರೂಪುಗೊಳ್ಳುತ್ತಿದ್ದ ಕ್ಲಿಷ್ಟ ಗಣಿತ ಸೂತ್ರಗಳನ್ನು ಹೊರಗೆಡವದೆ ಸುಮ್ಮನಿರಲು ರಾಮಾನುಜನ್ ಗೆ ಸಾಧ್ಯವೇ ಇರಲಿಲ್ಲ…. ಆದರೆ ಅವನ್ನೆಲ್ಲ ಬರೆದು ಜೋಡಿಸಲು ಪೇಪರ್ ಪೆನ್ನು ತರಲು ಸಾಕಷ್ಟು ಹಣವು ಇರಲಿಲ್ಲವಲ್ಲ….! ಹಾಗಾಗಿ ತಮ್ಮ ಮನಸ್ಸಿನಲ್ಲಿ ಹುಟ್ಟುತ್ತಿದ್ದ ಗಣಿತದ ಸೂತ್ರ ಪ್ರಮೇಯಗಳನ್ನೆಲ್ಲಾ ರಾಮಾನುಜನ್ ಸ್ಲೇಟಿನಲ್ಲಿ ಬರೆದು ಅವುಗಳನ್ನು ಬಿಡಿಸಿ…. ಪ್ರಮೇಯಗಳನ್ನು ಸಾಧಿಸಿ… ಉತ್ತರ ಗಳನ್ನು ಪಡೆಯುತ್ತಿದ್ದರು… ಆದರೆ ಇದನ್ನು ಸ್ಲೇಟಿನಲ್ಲಿ ತಾವು ಬರೆದಿದ್ದ ವಿವರಣೆಗಳನ್ನೆಲ್ಲ ಬಿಟ್ಟು ಹಾಕಿ ಕೇವಲ ಸೂತ್ರ ಮತ್ತು ಪ್ರಮೇಯಗಳನ್ನು ನೇರವಾಗಿ ಒಂದು ನೋಟು ಪುಸ್ತಕದಲ್ಲಿ ಬರೆದಿಡುತ್ತಿದ್ದರು… ಆದರೆ ಅದನ್ನೆಲ್ಲ ಇನ್ನೊಬ್ಬರಿಗೆ ತೋರಿಸಲು ಅವರಿಗೆ ಸಾಧ್ಯವೇ ಆಗುತ್ತಿರಲಿಲ್ಲ… ಯಾಕೆಂದರೆ ಅದೆಲ್ಲಾ ಯಾರಿಗೂ ಅರ್ಥ ಆಗುತ್ತಿರಲಿಲ್ಲ…. ! ತನ್ನ ಸಹಪಾಠಿಗಳಿಗೂ ಹಾಗೂ ತನ್ನ ಗುರುಗಳಿಗೂ ತಾನು ಸೃಷ್ಟಿಸಿದ ಗಣಿತ ಸೂತ್ರಗಳು, ಪ್ರಮೇಯಗಳು ಅರ್ಥವೇ ಆಗುತ್ತಿರಲಿಲ್ಲವಾದ್ದರಿಂದ ರಾಮಮಾನುಜನ್ ತಮ್ಮ ಮನೆ ಊರು ತೊರೆದು ಅಂದಿನ ಮದರಾಸಿಗೆ ಪರಾರಿಯಾದರು… ಇತ್ತ ಅವರ ತಾಯಿಯು ಗಾಬರಿಯಿಂದ ಪೊಲೀಸರಿಗೆ ದೂರು ನೀಡಿ ತಮ್ಮ ಮಗ ಕಾಣೆಯಾಗಿದ್ದಾನೆ ಅಂತ ಪತ್ರಿಕೆಗಳಿಗೂ ಜಾಹೀರಾತು ನೀಡಿದ್ದರು…!
ಮದರಾಸಿನಲ್ಲಿ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪ್ರಯತ್ನ ಪಡುತ್ತ, ಮಕ್ಕಳಿಗೆ ಗಣಿತದ ಟ್ಯೂಷನ್ ನೀಡುತ್ತಾ.. ಚಿಕ್ಕ ಪುಟ್ಟ ನೌಕರಿ ಮಾಡಿ ಹೊಟ್ಟೆ ತುಂಬಿಸಲು ಸಾಹಸ ಮಾಡುತ್ತ ತೀರಾ ಬಡತನದ ಜೀವನ ನಡೆಸುತ್ತಿದ್ದರೂ ರಾಮಾನುಜನ್ ತನ್ನ ಗಣಿತದ ಸಂಶೋಧನೆಯನ್ನು ಮಾಡುವುದನ್ನು ಬಿಟ್ಟಿರಲಿಲ್ಲ… ಅವರನ್ನು ಆವರಿಸಿಕೊಂಡಿದ್ದ ಗಣಿತವೂ ಅವರನ್ನು ತೊರೆಯಲಿಲ್ಲ… ಮದರಾಸು ಹಡಗುಕಟ್ಟೆಯಲ್ಲಿ ಅಕೌಂಟಿಂಗ್ ಕ್ಲರ್ಕ್ ಆಗಿ ರಾಮಾನುಜನ್ ಅವರಿಗೆ ಕೆಲಸ ಸಿಕ್ಕಿತು…
ಇದು ರಾಮಾನುಜನ್ ಅವರ ಪಾಲಿನ ಇನ್ನೊಂದು ಮುಖ್ಯ ತಿರುವು… ಅಲ್ಲಿ ಆತನ ಮೇಲಧಿಕಾರಿಯಾಗಿದ್ದ ಎಸ್. ನಾರಾಯಣ ಅಯ್ಯರ್ ಓರ್ವ ಪ್ರಖಾಂಡ ಗಣಿತ ತಜ್ಞರೂ, Indian Mathematical Society ಯ ಸ್ಥಾಪಕ ಸದಸ್ಯರು ಕೂಡ ಆಗಿದ್ದರು. ಅವರು, ರಾಮಾನುಜನ್ ತಮ್ಮ ಪುಸ್ತಕದಲ್ಲಿ ರಚಿಸಿದ್ದ ಗಣಿತದ ಸೂತ್ರ, ಪ್ರಮೇಯಗಳನ್ನು ನೋಡಿ ದಂಗು ಬಡಿದು ಹೋದರು… ರಾಮಾನುಜನ್ ಓರ್ವ ಅಸಾಧಾರಣ ಪ್ರತಿಭಾವಂತ ಅನ್ನುವುದು ಅವರಿಗೆ ಅಂದೇ ಖಚಿತವಾಗಿತ್ತು… ಹಾಗಾಗಿ ಅವರು ಇಂಗ್ಲೆಂಡಿನಲ್ಲಿರುವ ಖ್ಯಾತ ಗಣಿತ ಶಾಸ್ತ್ರಜ್ಞರನ್ನು ಸಂಪರ್ಕಿಸಿ ಈ ರಾಮಾನುಜನ್ ಎಂಬ ವಿಸ್ಮಯದ ಬಗ್ಗೆ ಹೇಳಿದರು… ಅವರು ಬರೆದಿಟ್ಟ ಹೆಚ್ಚಿನ ಗಣಿತ ಸೂತ್ರಗಳೆಲ್ಲಾ ಇಂಗ್ಲೆಂಡಿನಲ್ಲೂ ಯಾರಿಗೂ ಕೂಡ ಅರ್ಥವಾಗಲಿಲ್ಲ…. ಏಕೆಂದರೆ ಆ ಕಾಲದಲ್ಲೇ ರಾಮಾನುಜನ್ ಅವರೆಲ್ಲರಿಗಿಂತ ತಮ್ಮ ಬುದ್ಧಿಮತ್ತೆಯಲ್ಲಿ ಕಡಿಮೆಯೆಂದರೂ ಒಂದು ನೂರು ವರ್ಷವೇ ಮುಂದಿದ್ದರು… ಆದುದರಿಂದ ಅವರು ಬರೆದಿದ್ದ ಗಣಿತ ಸೂತ್ರಗಳನ್ನು ತಿರಸ್ಕರಿಸಿ ಆತ ಓರ್ವ ವಂಚಕ …. ಆತ ಬರೆದದ್ದಕ್ಕೆ ತಲೆಬುಡವೇ ಇರುವುದಿಲ್ಲ ಅಂತ ಹೇಳಿದರು…! ಅದಕ್ಕೊಂದು ಕಾರಣವೂ ಇತ್ತು. ರಾಮಾನುಜನ್ ತನಗೆ ಚಿಕ್ಕಂದಿನಲ್ಲಿ ಸಿಕ್ಕಿದ್ದ ” A Synopsis of Elementary Results in Pure & Applied Mathematics” ಪುಸ್ತಕದಲ್ಲಿನ ರೀತಿಯೇ ಕೇವಲ ಗಣಿತ ಸೂತ್ರ ಮತ್ತು ಪ್ರಮೇಯಗಳನ್ನು ನೇರವಾಗಿ ಬರೆಯುತ್ತಿದ್ದರು… ಆದರೆ ಅವುಗಳನ್ನು ಹಂತ ಹಂತವಾಗಿ ಬಿಡಿಸಿ, ವಿವರಿಸಿ ಅರ್ಥವಾಗುವಂತೆ ಬರೆಯುತ್ತಲೇ ಇರಲಿಲ್ಲ… ಹಾಗಾಗಿ ಆತ ಬರೆದ ಗಣಿತ ಸೂತ್ರಗಳನ್ನು ನೋಡಿದರೆ ಅವರ್ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ… !
ಆದರೆ… ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಖ್ಯಾತ ಗಣಿತ ಶಾಸ್ತ್ರದ ಪ್ರೊಫೆಸರ್ ಜಿ. ಎಚ್. ಹಾರ್ಡಿಯವರಿಗೆ ರಾಮಾನುಜನ್ ಬರೆದ ಒಂಭತ್ತು ಪುಟಗಳ ಮತ್ತು ನೋಟ್ಸ್ ನೋಡಿ ಆಶ್ಚರ್ಯಾಘಾತವಾಗಿತ್ತು… ಹಾರ್ಡಿ ತಮ್ಮ ಸ್ನೇಹಿತ ಜೆ. ಈ ಲಿಟ್ಲ್ ವುಡ್ ಜೊತೆಗೆ ಸೇರಿಕೊಂಡು ರಾಮಾನುಜನ್ ಒಂಭತ್ತು ಪುಟಗಳಲ್ಲಿ ಬರೆದಿದ್ದ ಸಂಕೀರ್ಣ ಗಣಿತ ಸೂತ್ರಗಳ ಅಧ್ಯಯನವನ್ನು ನಡೆಸಿದರು…. ಅವರಿಗೂ ಇದೇನೆಂದು ಅರ್ಥವಾಗಲಿಲ್ಲವಾದರೂ ಕೂಡ ಆತನ ಒಳಗೊಬ್ಬ ಅಸಾಧಾರಣ ಗಣಿತ ವಿಜ್ಞಾನಿಯು ಇರುತ್ತಾನೆ ಎಂಬುವುದು ಅರ್ಥವಾಯಿತು. ಇಲ್ಲಿಂದ ನಂತರದಲ್ಲಿ ರಾಮಾನುಜನ್ ಅವರ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ.
1914ರಲ್ಲಿ ಜಿ. ಎಚ್ ಹಾರ್ಡಿ ಮತ್ತವರ ಸ್ನೇಹಿತರ ಪ್ರಯತ್ನದಿಂದಾಗಿ ರಾಮಾನುಜನ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸುತ್ತಾರೆ…! ಅವರಿಗೆ ವಿಶ್ವವಿದ್ಯಾಲಯ ಪೂರ್ವ ಅಭ್ಯಾಸವೇ ಇರಲಿಲ್ಲ… ಆತ ಅಂದಿನವರೆಗೂ ಯಾರ ಬಳಿಯೂ ಗಣಿತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲೇ ಇಲ್ಲ… ಕೆಂಬ್ರಿಡ್ಜಿಗೆ ಕಾಲಿಡುವುದಕ್ಕೂ ಮುನ್ನವೇ ಆತ ಭಾರತದಲ್ಲೇ ರಚಿಸಿದ್ದ ಸಾವಿರಾರು ಗಣಿತ ಸೂತ್ರಗಳನ್ನು ಎರಡು ಮೂರು ನೋಟುಬುಕ್ಕುಗಳ ತುಂಬಾ ಬರೆದುಕೊಂಡು ಹೋಗಿದ್ದರು..! ಅಲ್ಲಿಗೆ ಹೋಗಿ ಎರಡೇ ವರ್ಷದೊಳಗೆ ಆತನ ಅಗಾಧ ಪಾಂಡಿತ್ಯಕ್ಕೆ ವಿಶ್ವವಿದ್ಯಾಲಯವೇ ಬೆರಗಾಗಿ ಅವರಿಗೆ ಪಿ.ಎಚ್.ಡಿ ಗೆ ಅಥವಾ ಡಾಕ್ಟರೇಟ್ ಗೆ ಸಮಾನವಾದ ಪದವಿ ನೀಡಿ ಪುರಸ್ಕರಿಸಿತ್ತು…! ( ಏಕೆಂದರೆ ಆಗಿನ್ನೂ ಪಿ.ಎಚ್.ಡಿ ಗೆ ಅಥವಾ ಡಾಕ್ಟರೇಟ್ ಪದವಿಯೇ ಇನ್ನೂ ಶುರುವಾಗಿರಲಿಲ್ಲ) ..
ರಾಮಾನುಜನ್ ಇಂಗ್ಲೆಂಡಿನಲ್ಲಿ ಅನಾರೋಗ್ಯಕ್ಕೆ ಈಡಾದರು … ಭಾರತದಲ್ಲಿ ಇರುವಾಗಲೇ ಜೀರ್ಣಾಂಗಕ್ಕೆ ಸಂಬಂಧಪಟ್ಟ ಖಾಯಿಲೆಗೆ ತುತ್ತಾಗಿದ್ದ ಅವರು ಅಪ್ಪಟ ಸಸ್ಯಾಹಾರಿಯಾಗಿದ್ದರಿಂದ ಇಂಗ್ಲೆಂಡಿನಲ್ಲೂ ಆಹಾರದ ಸಮಸ್ಯೆಯು ಎದುರಾಗಿತ್ತು… ಭಾರತದಲ್ಲಿ ತಮ್ಮ ಹದಿನಾರನೆಯ ವಯಸ್ಸಿನಿಂದ ಇಪ್ಪತ್ತಮೂರನೆಯ ವಯಸ್ಸಿನ ವರೆಗೆ ಸರಿಯಾಗಿ ಹೊಟ್ಟೆಗೆ ತಿನ್ನಲೂ ಆಹಾರವಿಲ್ಲದೆ ಕಡುಬಡತನದಲ್ಲೇ ದಿನವನ್ನು ದೂಡಿದ್ದ ರಾಮಾನುಜನ್ ಆಗ ತಾನು ಜಿ. ಎಚ್ ಹಾರ್ಡಿಗೆ ಪತ್ರವೊಂದರಲ್ಲಿ ” ತಾನು ಈಗಾಗಲೇ ಅರೆಹೊಟ್ಟೆಯಲ್ಲಿ ಜೀವಿಸುತ್ತಿದ್ದೇನೆ “… ನನ್ನ ಮೆದುಳನ್ನು ಬದುಕಿಸಿಕೊಳ್ಳಲಿಕ್ಕಾದರೂ ನನಗೆ ಕನಿಷ್ಠ ಆಹಾರಬೇಕು…!” ಈ ಮಾತುಗಳು ಅವರ ದಯನೀಯ ಪರಿಸ್ಥಿತಿಯ ದರ್ಶನ ಮಾಡಿಸುತ್ತದೆ… ಇಂಗ್ಲೆಂಡಿನಿಂದ ಭಾರತಕ್ಕೆ ಒಂಭತ್ತು ವರ್ಷಗಳ ಬಳಿಕ ಮರಳಿದ ರಾಮಾನುಜನ್, ಆ ಬಳಿಕ ಬದುಕಿದ್ದು ಕೇವಲ ಒಂದೇ ವರ್ಷ… ಆದರೆ ನಿಧನರಾಗುವ ಮೂರು ದಿನಗಳ ಹಿಂದಿನವರೆಗೂ ಕೂಡ ಅವರು ನಿರಂತರವಾಗಿ ಗಣಿತ ಸೂತ್ರಗಳ ಅನ್ವೇಷಣೆಯಲ್ಲೇ ತೊಡಗಿದ್ದರು….
ಅವರ ರಚಿಸಿದ್ದ ಅನೇಕ ಸೂತ್ರಗಳನ್ನು ಪ್ರಮೇಯ ಗಳನ್ನು ಇವತ್ತಿಗೂ ಕೂಡ ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವೇ ಆಗಿರುವುದಿಲ್ಲ… ಅದಕ್ಕೂ ಹೆಚ್ಚಾಗಿ ಇಂಥ ಕ್ಲಿಷ್ಟ ಸೂತ್ರಗಳೆಲ್ಲ ಅವರಿಗೆ ಹೇಗೆ ಹೊಳೆಯುತ್ತಿದ್ದವು ಎಂಬುವುದು ಇವತ್ತಿಗೂ ಕಗ್ಗಂಟೇ ಆಗಿರುತ್ತದೆ …! ಖ್ಯಾತ ಅಣು ವಿಜ್ಞಾನಿಯಾದ ನೀಲ್ಸ್ ಬೊಹ್ರ್ ಪ್ರಥಮವಾಗಿ nucleus ನ ಕುರಿತು ಸಂಶೋಧನೆ ನಡೆಸುವಾಗಲೂ ಆತ ಬಳಸಿದ್ದು ರಾಮಾನುಜನ್ ರಚಿಸಿ ಹೋಗಿದ್ದ ಗಣಿತ ಸೂತ್ರವನ್ನೇ… ಸುಮಾರು ನೂರ ವರ್ಷಗಳ ಹಿಂದೆ ರಾಮಾನುಜನ್ ಮಂಡಿಸಿದ್ದ mock theta functions ಆಗ ಯಾರಿಗೂ ಕೂಡ ಸರಿಯಾಗಿ ಅರ್ಥವೇ ಆಗಿರಲಿಲ್ಲ… ಆದರೆ ಅವುಗಳ ಬಳಕೆ ಈಗ black hole ಅಧ್ಯಯನದಲ್ಲಿ, quantum physics ಅಧ್ಯಯನದಲ್ಲಿ ಬಳಕೆಯಾಗುತ್ತಿದೆ… ಅದೆಲ್ಲಾ ಹೋಗಲಿ ಆಧುನಿಕ computer algorithm ಗಳಲ್ಲೂ ಕೂಡ ರಾಮಾನುಜನ್ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ… ಅಷ್ಟಲ್ಲದೇ ಇವತ್ತಿಗೂ ರಾಮಾನುಜನ್ ರಚಿಸಿ ಹೋದ ಸಾವಿರಾರು ಪ್ರಮೇಯಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ….
ಅತ್ಯಂತ ಕ್ಲಿಷ್ಟವಾದ , ಮಾನವನಿಂದ ಸಾಧ್ಯವೇ ಇಲ್ಲದ ಗಣಿತದ ಲೆಕ್ಕಾಚಾರಗಳನ್ನು ಹಾಕಲೆಂದೇ ಸಿದ್ಧಪಡಿಸಲಾದ wolfram language ಮತ್ತು wolfram mathematica ಅನ್ನುವ ಈಗಿನ ಅತ್ಯಾಧುನಿಕ ಕಂಪ್ಯೂಟರ್ ಕೂಡಾ ರಾಮಾನುಜನ್ ಸುಮಾರು ನೂರು ವರ್ಷಗ ಹಿಂದೆ ರಚಿಸಿದ್ದ ಪ್ರಮೇಯಗಳನ್ನು ಬಿಡಿಸಿ ವಿಚಾರಿಸಲು ಹೆಣಗಾಡುತ್ತಿದೆ.
ಹಾಗಾದರೆ ಈ ಮನುಷ್ಯ ರಾಮಾನುಜನ್ ಗೆ …. ಗಣಿತವನ್ನು ಶಾಸ್ತ್ರೀಯವಾಗಿ ಯಾವತ್ತಿಗೂ ಕೂಡ ಅಭ್ಯಾಸವನ್ನು ಮಾಡದೆಯೇ ಇದ್ದ , ಆ ಸಂಬಂಧಿತ ಯಾವುದೇ ಪದವಿ ಶಿಕ್ಷಣವನ್ನೂ ಪಡೆಯದ… ತನ್ನಷ್ಟಕ್ಕೆ ತಾನೇ ಗಣಿತವನ್ನು ಅಭ್ಯಾಸ ಮಾಡಿದ ಆತನಿಗೆ ಇದೆಲ್ಲಾ ಹೇಗೆ ಸ್ಪುರಣಗೊಳ್ಳುತ್ತಿದ್ದವು…? ಆತನ ಮಿದುಳಿನೊಳಕ್ಕೆ ತನ್ನಷ್ಟಕ್ಕೆ ತಾನೇ ಉದ್ಭವವಾಗುತ್ತಿದ್ದ ಗಣಿತ ಸೂತ್ರಗಳ ಮೂಲ ಯಾವುದು..? ಇದನ್ನು ಇದುವರೆಗೆ ಯಾರೂ, ಯಾವ ವಿಜ್ಞಾನಿಯೂ ವಿವರಿಸಿಲ್ಲ…. ಆದರೆ…
ಸ್ವತಃ ರಾಮಾನುಜನ್ ಅವರೇ ತನಗೆ ಈ ಗಣಿತ ಸೂತ್ರಗಳೆಲ್ಲ ಹೇಗೆ ಹೊಳೆಯುತ್ತಿದ್ದವು ಅಂತ ಹೇಳಿದ್ದಾರೆ… ಅವರ ಮಾತಿನ ಪ್ರಕಾರ ” ದೈವತ್ವದ ವಿಚಾರವಿಲ್ಲದ ದೈವತ್ವದ ಪ್ರೇರಣೆಯಿಲ್ಲದ ಯಾವುದೇ ಗಣಿತ ಸೂತ್ರವೂ ನನ್ನ ಪಾಲಿಗೆ ಅರ್ಥಹೀನ…” ಮಹಾ ದೈವಭಕ್ತನಾಗಿದ್ದ ರಾಮಾನುಜನ್ ಗೆ ತನ್ನ ಕುಲದೇವತೆ ಮಹಾಲಕ್ಷ್ಮಿಯ ಮೇಲೆ ಅಪರಿಮಿತ ವಿಶ್ವಾಸ… ನಾಮಕ್ಕಲ್ ನ ಮಹಾಲಕ್ಷ್ಮಿ ದೇವಿಯ ಜೊತೆಗೆ ಆತ ಆರಾಧಿಸುತ್ತಿದ್ದುದು ನರಸಿಂಹ ಸ್ವಾಮಿಯನ್ನು … ತನಗಾಗುತ್ತಿದ್ದ ವಿಶೇಷ ಅನುಭವಗಳನ್ನು ಸ್ವತಹ ರಾಮಾನುಜನ್ ಹೀಗೆ ಹೇಳಿಕೊಂಡಿದ್ದರು….”ನಿದ್ರೆಯಲ್ಲಿದ್ದಾಗ ನನಗೆ ವಿಲಕ್ಷಣ ಅನುಭವಗಳಾಗುತ್ತಿದ್ದವು… ಕಣ್ಣ ಮುಂದೆ ಕೆಂಪು ತೆರೆ- ಹರಿಯುವ ರಕ್ತದ ತೆರೆಯೊಂದು ಮೂಡುತ್ತಿತ್ತು… ಅದನ್ನು ನಾನು ಹಾಗೆಯೆ ಗಮನಿಸುತ್ತಿದ್ದೆ. ತತ್ ಕ್ಷಣವೇ ಒಂದು ಕೈ ಅದರಲ್ಲಿ ಬರೆಯಲು ಪ್ರಾರಂಭಿಸುತಿತ್ತು… ನಾನು ಸಂಪೂರ್ಣ ಜಾಗೃತನಾಗುತ್ತಿದ್ದೆ… ಆ ಕೈ ಅಸಂಖ್ಯಾತ ಧೀರ್ಘ ವೃತ್ತಗಳ ಸಮಗ್ರ ಸಂಖ್ಯೆಗಳನ್ನು ಬರೆಯುತ್ತ ಹೋಗುತ್ತಿತ್ತು… ಅದು ನನ್ನ ಮನಸ್ಸಿನಲ್ಲಿ ಅಚ್ಹೊತ್ತಿದಂತೆ ದಾಖಲಾಗುತ್ತಿದ್ದವು…. ಅದನ್ನೇ ಮರುದಿನ ನಾನು ಬರೆದಿಟ್ಟುಕೊಳ್ಳುತ್ತಿದ್ದೆ… “
ಇದು ತಮಗಾಗುತ್ತಿದ್ದ ಅಂತಃ ಸ್ಫುರಣದ ಬಗ್ಗೆ ರಾಮಾನುಜನ್ ಹೇಳುತ್ತಿದ್ದ ಮಾತುಗಳು… ಜಗತ್ತಿನಲ್ಲಿ ಯಾರಿಗೂ ಹೊಳೆಯದ, ಅದೆಷ್ಟು ಅಧ್ಯಯನ ನಡೆಸಿದರೂ ಒಲಿಯದ ತರ್ಕ, ವಿಚಾರಗಳು ಅಚಾನಕ್ಕಾಗಿ ಅದು ಹೇಗೆ ರಾಮಾನುಜನ್ ಮಿದುಳಿನೊಳಗೆ ಹುಟ್ಟಿಕೊಳ್ಳುತ್ತಿತ್ತು? ಹಿಂದಿನ ವೇದಕಾಲದ ನಮ್ಮ ಋಷಿಗಳನ್ನು ಮಂತ್ರ ದೃಷ್ಠಾರರೆಂದು ಕರೆಯುತ್ತಾರೆ… ಅವರಿಗೆ ಮಂತ್ರಗಳ ರೂಪದಲ್ಲಿ ಜ್ಞಾನದ ಹೊಳಹುಗಳು ಸ್ಫುರಣೆಗಳು ತನ್ನಿಂದ ತಾನೇ ಬರುತ್ತಿದ್ದವು ಅಂತ ಅಂಬೋಣವಿದೆ… ಬಹುಶ ಅದಕ್ಕಾಗಿಯೇ ಏನೋ ವೇದಗಳನ್ನು ಅಪೌರುಷೇಯ ಅಂತ ಕರೆದದ್ದು… ವೇದಮಂತ್ರಗಳೂ ಆ ಋಷಿಗಳ ಮಸ್ತಿಷ್ಕ ದೊಳಗಿನ ಅಂತಃ ಸ್ಫುರಣಗಳೇ ಆಗಿರಬೇಕು…. ನಮ್ಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್…!
ಅಂದ ಹಾಗೆ ಇಂದಿಗೆ ರಾಮಾನುಜನ್ ಎಂಬ ಆ ಮೇಧಾವಿಯು ಜನಿಸಿ ನೂರಾಮೂವತ್ತ ಏಳು ವರ್ಷಗಳು ಕಳೆದಿರುತ್ತದೆ… ಅವರ ಸಂಸ್ಮರಣೆಯ ಸವಿನೆನಪಿಗಾಗಿ ನಮ್ಮ ಭಾರತ ದೇಶವು ಈ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಘೋಷಿಸಿರುತ್ತದೆ.
ವಿಜ್ಞಾನದ ಅನ್ವೇಷಣೆಗಳು ಯಾವಾಗಲೂ ಕೂಡ ನಿರಂತರವಾಗಿ ಮುಂದುವರೆಯಲು ಗಣಿತವೇ ಪ್ರಧಾನವಾದ ಮೂಲಾಧಾರವು ಆಗಿರುತ್ತದೆ – ನಾಡಿನ , ದೇಶದ ಎಲ್ಲಾ ಗಣಿತಜ್ಞರಿಗೂ , ಗಣಿತ ವಿಜ್ಞಾನಿಗಳಿಗೂ , ಗಣಿತ ಅಧ್ಯಾಪಕರು – ಪ್ರಾಧ್ಯಾಪಕರುಗಳಿಗೂ ಹಾಗೂ ಗಣಿತದ ವಿದ್ಯಾರ್ಥಿಗಳಿಗೂ ( ವೈಯುಕ್ತಿಕವಾದಂತೆ ಸ್ವತಃ ನಾನೂ ಕೂಡ ಒಬ್ಬ ಗಣಿತದ ಅಚ್ಚು ಮೆಚ್ಚಿನ ವಿದ್ಯಾರ್ಥಿಯು ಆಗಿರುವುದು ಆಗಿರುತ್ತದೆ ) ರಾಷ್ಟ್ರೀಯ ಗಣಿತ ದಿನದ ಶುಭಾಶಯಗಳು.