ಭಾರತ ಸಂವಿಧಾನದ ರಚನೆಯಲ್ಲಿ ಬಹುಪ್ರಮುಖವಾದಂತೆ , ತನ್ನ ಪ್ರಧಾನ ವಾದ ಹಾಗೂ ಮಹತ್ವದ ಪಾತ್ರವನ್ನು ನಿವ೯ಹಿಸಿದ ವ್ಯಕ್ತಿ , ಹೆಮ್ಮೆಯ ಕನ್ನಡಿಗ ರಾದ ಸರ್ ಬಿ. ಎನ್ ರಾವ್ ಅವರ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿರುವುದಿಲ್ಲ.
ಸರ್ ಬಿ. ಎನ್ ರಾವ್ ಅವರ ಹಿನ್ನೆಲೆಗಳು :
ಇವರ ಹೆಸರಿನಲ್ಲಿರುವ ‘ ಬಿ ‘ ಎಂದರೆ ‘ ಬೆನಗಲ್ ‘ ಎಂದು ಮತ್ತು ‘ ಎನ್ ‘ ಎಂದರೆ ‘ ನರಸಿಂಗ ‘ ಎಂದು ಹಾಗೂ ಅದರಂತೆ , ಇವರ ಪೂಣ೯ವಾದ ಹೆಸರು ಬೆನಗಲ್ ನರಸಿಂಗರಾವ್ ಎಂದು ಆಗಿರುತ್ತದೆ. ‘ ಬೆನಗಲ್ ‘ ಎಂಬುವುದು ಕಾರ್ಕಳ ಮತ್ತು ಮಂಗಳೂರು ಇವುಗಳ ಮಧ್ಯದಲ್ಲಿ ಇರುವಂತಹ ಪುಟ್ಟದೊಂದು ಹಳ್ಳಿಯು ಆಗಿರುತ್ತದೆ. ಈ ಹಳ್ಳಿಯಲ್ಲಿನ ಚಿತ್ರಾಪುರ ಸಾರಸ್ವತ ಸಂಪ್ರದಾಯಸ್ಥ ಮನೆತನದ ಕುಟುಂಬದಲ್ಲಿ ಕ್ರಿ.ಶ. 1887ರ ಫೆಬ್ರವರಿ 26 ರಂದು ಜನಿಸಿದವರು ನರಸಿಂಗರಾವ್ ರವರು ಆಗಿರುತ್ತಾರೆ.
ಇವರ ವಂಶದ ಜನರು ಪಾರ್ಸಿಗಳಿ ಗಿಂತಲೂ ಕೂಡ ಅಲ್ಪಸಂಖ್ಯಾತರು ಆಗಿರುತ್ತಾರೆ. ಇಡೀ ಜಗತ್ತಿನಲ್ಲಿ 30 ಸಾವಿರ ಚಿತ್ರಾಪುರ ಸಾರಸ್ವತರು ಇದ್ದರೆ ಹೆಚ್ಚು ಆಗಿರುತ್ತದೆ. ಆದರೆ ಇಡೀ ಜಗತ್ತಿನಲ್ಲಿಯೇ ಬಹಳಷ್ಟು ಹೆಸರು ಮಾಡಿದ ಇದೇ ಸಮುದಾಯದ , ಪಂಗಡದ ಮಹಾಮಹಿಮರುಗಳು ಹಲವರು ಇರುತ್ತಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೇಶಭಕ್ತ ಕಾರ್ನಾಡ್ ಸದಾಶಿವರಾಯರು , ಶಿಕ್ಷಣ ಕ್ರಾಂತಿಯ ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು , ಸಾಹಿತ್ಯ ಕ್ಷೇತ್ರದ ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯರು, ಗೌರೀಶ ಕಾಯ್ಕಿಣಿ, ಜಯಂತ್ ಕಾಯ್ಕಿಣಿ , ಕ್ರೀಡಾಲೋಕದ ಪ್ರಕಾಶ್ ಪಡುಕೋಣೆ, ಪತ್ರಿಕಾರಂಗದ ಸಂತೋಷ ಕುಮಾರ ಗುಲ್ವಾಡಿ, ಚಲನಚಿತ್ರ ಚಿತ್ರ ಹಾಗೂ ರಂಗಭೂಮಿ ಕ್ಷೇತ್ರದಲ್ಲಿನ ಶ್ಯಾಮ್ ಬೆನಗಲ್ , ಗಿರೀಶ್ ಕಾರ್ನಾಡ್ , ಅನಂತನಾಗ್ , ಶಂಕರನಾಗ್ ………ಇನ್ನೂ ಮುಂತಾದ ಹಲವರುಗಳು ಆಗಿರುತ್ತಾರೆ.
ನರಸಿಂಗರಾವ್ ಅವರ ತಂದೆಯವರಾದ ರಾಘವೇಂದ್ರರಾವ್ ಅವರು ಅಲ್ಲಿನ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಬಹಳ ಸುಪ್ರಸಿದ್ಧರಾದ ವೈದ್ಯರು ಆಗಿದ್ದವರು ಆಗಿರುತ್ತಾರೆ.
ನರಸಿಂಗರಾವ್ ಅವರು ಮಂಗಳೂರಿನ ಉವ೯ದ ಕೆನರಾ ಶಾಲೆಯಲ್ಲಿ ಪ್ರಾಥಮಿಕ , ಮಾಧ್ಯಮಿಕ ಹಾಗೂ ಪ್ರೌಡಶಿಕ್ಷಣದ ವಿದ್ಯಾಭ್ಯಾಸವನ್ನು ಕಲಿಯುತ್ತಿದ್ದವರು. ಕ್ರಿ.ಶ. 1901 ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನವನ್ನು ಪಡೆದವರು ಆಗಿರುತ್ತಾರೆ. ತದನಂತರದಲ್ಲಿ , ಅಲ್ಲಿಂದ ಮದ್ರಾಸಿಗೆ ಹೋಗಿ ಅಲ್ಲಿನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿ ಅಲ್ಲಿ ಇಂಗ್ಲೀಷ್ , ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸಮಾಡಿ ನಂತರ ಎಫ್.ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದವರು ಆಗಿರುತ್ತಾರೆ . ತದನಂತರದಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದು ನರಸಿಂಗರಾವ್ ಅವರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಅಲ್ಲಿನ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷಗಳ ಪದವಿಯ ವ್ಯಾಸಂಗವನ್ನು ಮಾಡಿ ಕ್ರಿ. ಶ 1909 ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷವೇ ಭಾರತೀಯ ನಾಗರಿಕ ಸೇವಾ ಪರೀಕ್ಷೆ ಗಳನ್ನು ಬರೆದು ಅದನ್ನೂ ಕೂಡ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಆಡಳಿತದ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾಗಿ ಬಂದ ನರಸಿಂಗರಾವ್ ಅವರು ಆ ಕಾಲದಲ್ಲಿ ಮೊದಲು ಮಾಡಿದ ಬಹುದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು ಆಗಿರುತ್ತದೆ. ಅಂದಿನ ಬ್ರಿಟಿಷ್ ಸರ್ಕಾರವು ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷಗಳಲ್ಲಿ ಮುಗಿಸಿದ್ದಕ್ಕಾಗಿ ನರಸಿಂಗರಾವ್ ಅವರಿಗೆ ಗೌರವಯುತ ವಾದ ನೈಟ್ – ಹುಡ್ ಬಿರುದನ್ನು ಕೊಡಲಾಯಿತು. ಅದರಿಂದ ಅವರ ಹೆಸರಿನ ಹಿಂದೆ ಸರ್ ಎಂಬ ಉಪಾಧಿಯು ಸೇರಿಕೊಂಡಿತು. ತದನಂತರದಲ್ಲಿ ಬ್ರಿಟಿಷ್ ಸರ್ಕಾರವು ನರಸಿಂಗರಾವ್ ಅವರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಯಿಕೊಂಡಿತು. ಅಲ್ಲಿನ ನಗರ ಮತ್ತು ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನವನ್ನು ಮಾಡಿದಂತೆ , ಅದರ ಸಂಬಂಧಿತ ವಿಸ್ತ್ರತವಾದ ವರದಿಯನ್ನು ನೀಡಬೇಕೆಂದು ಕೇಳಿಕೊಂಡಿತು. ನರಸಿಂಗರಾವ್ ಅವರು ಅದನ್ನೂ ಕೂಡ ಅತ್ಯಂತ ಶ್ರದ್ಧೆಯಿಂದ ಮಾಡಿ ತಮ್ಮ ವರದಿಯನ್ನು ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು – ಮೂವತ್ತು ವರ್ಷಗಳ ಎಲ್ಲಾ ಸಂಬಂಧಿತ ಅಂಕಿ – ಅಂಶಗಳನ್ನು ಒಟ್ಟುಗೂಡಿಸಿ ಪರಿಗಣಿಸಿ , ಅದರಂತೆ ಆಳವಾದ ಅಧ್ಯಯನವನ್ನು ಮಾಡಿ ತಯಾರಿಸಿದ ಆ ವಿಸ್ತ್ರತವಾದ ವರದಿಯ ಆಧಾರದಲ್ಲಿಯೇ ಇಂದಿಗೂ ಕೂಡ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನದಿ ನೀರಿನ ಹಂಚಿಕೆಯು ನಡೆಯುತ್ತಿದೆ. ಯಾವಾಗಲೂ ಕೂಡ ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆಯೂ ಕಳೆದ ಎಪ್ಪತ್ತು ವರ್ಷಗಳಲ್ಲಿ ಆ ಸಂಬಂಧಿತ ನೀರಿನ ಹಂಚಿಕೆಯ ವಿಷಯದಲ್ಲಿ ಯಾವುದೇ ರೀತಿಯ ಸಮಸ್ಯೆಯು ಉದ್ಭವವು ಆಗಿಲ್ಲವೆಂದರೆ ಅದಕ್ಕೆ ಕಾರಣವು ನರಸಿಂಗರಾವ್ ಅವರ ದೂರದೃಷ್ಟಿಯಲ್ಲಿನ ಸೂಕ್ಷ್ಮಗ್ರಹಿಕೆಯು ಅಡಕವಾಗಿರುತ್ತದೆ ಎನ್ನಲೇಬೇಕಾಗಿರುತ್ತದೆ.
ನದಿನೀರಿನ ವರದಿಯನ್ನು ತಯಾರಿಸಿ ಕೊಟ್ಟ ಮೇಲೆ ಸರಕಾರವು ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿಕೊಂಡು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. ಕ್ರಿ.ಶ. 1944 ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತಿಯನ್ನು ಹೊಂದಿದ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.
ಕ್ರಿ.ಶ 1946 ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ಭಾರತಕ್ಕೆ ಆಡಳಿತದ ಅಧಿಕಾರವನ್ನು ಹಸ್ತಾಂತರಿಸುವುದು ಬಹುತೇಕವಾಗಿ ಖಚಿತವಾದ ಮೇಲೆ ನರಸಿಂಗರಾವ್ ಅವರನ್ನು ಭಾರತ ಸಂವಿಧಾನದ ರಚನಾ ಸಮಿತಿಯ ಸಲಹೆಗಾರರನ್ನಾಗಿ ( Constitutional Advisor ) ನೇಮಿಸಲಾಯಿತು. ತನ್ನ ಸುಧೀಘ೯ವಾದ ಸೇವಾವಧಿಯಲ್ಲಿನ ಸುಮಾರು ಮೂರು ದಶಕಗಳ ಕಾಲದಷ್ಟು ನಿರಂತರವಾಗಿ ನ್ಯಾಯಾಂಗದಲ್ಲಿನ ಕೆಲಸವನ್ನು ನಿವ೯ಹಿಸಿದ ಅವರಿಗಿಂತ ಸೂಕ್ತ ವ್ಯಕ್ತಿಯು ಬೇರಾರಿದ್ದಾರು ಅಲ್ಲವೇ…..!! ??
ಭಾರತ ಸಂವಿಧಾನದ ರಚನೆಯಲ್ಲಿ ಸರ್ ಬಿ. ಎನ್ ರಾವ್ ರವರ ಬಹು ಪ್ರಮುಖ – ಪ್ರಧಾನ ಹಾಗೂ ಮಹತ್ವದ ಪಾತ್ರ :
ಸರ್ಕಾರವು ನೇಮಿಸಿ ಬೇಕಾಗಿರುವುದನ್ನು ಕೇಳಿಕೊಂಡಂತೆ , ನರಸಿಂಗರಾವ್ ಅವರು ಅಂತರರಾಷ್ಟ್ರೀಯವಾಗಿ ಹಲವು ವಿವಿಧ ದೇಶಗಳಲ್ಲಿನ ಸಂವಿಧಾನದ ವಿಚಾರಗಳ ಅಂಶಗಳ ಸಂಬಂಧಿತ ಅವುಗಳಲ್ಲಿನ ವಿಷಯಗಳನ್ನು ಸಂಗ್ರಹಿಸಿ ಹಾಗೂ ಕೂಲಂಕುಷವಾಗಿ ಅವುಗಳನ್ನು ಪರಿಶೀಲಿಸಿದಂತೆ , ಬಹಳ ಶ್ರದ್ಧೆಯಿಂದ ಅದರ ಸಂಬಂಧಿತ ಸೂಕ್ತ ಅಧ್ಯಯನವನ್ನು ಕೈಗೊಂಡು , ಅದರಂತೆ ನಮ್ಮ ದೇಶಕ್ಕಾಗಿ ತಕ್ಕಂತೆ ಅನ್ವಯಿಸುವ ಹಾಗೂ ಅದಕ್ಕಾಗಿ ಒಪ್ಪಿತ ಉತ್ತಮ ಅಂಶ ಮತ್ತು ವಿಷಯಗಳ ಅನುಸಾರವಾಗಿ ಭಾರತ ದೇಶದ ಸಂವಿಧಾನದ ಸ್ಥೂಲ ಕರಡನ್ನು ( Rough Draft ) ಕ್ರಿ.ಶ 1947 ರಲ್ಲಿ ಸಿದ್ಧಪಡಿಸಿದರು. ಅದರಂತೆ , ಅದರಲ್ಲಿ ಒಟ್ಟು 243 ವಿಧಿಗಳು ಮತ್ತು 13 ಅನುಚ್ಛೇದಗಳು ಇದ್ದವು. ಇದರ ಸಂಬಂಧಿತ ತನ್ನ ಕರ್ತವ್ಯವನ್ನು ನಿವ೯ಹಿಸಲು ನರಸಿಂಗರಾವ್ ಅವರು ಯಾವುದೇ ಒಂದೇ ಒಂದು ರೂಪಾಯಿ ವೇತನವನ್ನು ಅಥವಾ ಸಂಭಾವನೆಯನ್ನು ಪಡೆಯದೆಯೇ , ಅದನ್ನು ದೇಶಕ್ಕಾಗಿ ತನ್ನ ಒಂದು ಸೇವೆಯ ರೀತಿಯಲ್ಲಿ ಉಚಿತವಾಗಿಯೇ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶದ ವಿಷಯವು ಆಗಿರುತ್ತದೆ.
ಭಾರತ ಸಂವಿಧಾನದ ಸ್ವರೂಪಗಳು :
ಭಾರತದ ಸಂವಿಧಾನವನ್ನು ‘ Bag of Borrowings ’ ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನವು ಹಲವು ಉತ್ತಮ ಅಂಶಗಳನ್ನು ಇತರ ವಿದೇಶಗಳ ಸಂವಿಧಾನಗಳ ಆಧರಿತವಾದಂತೆ ಎರವಲುವಿನ ರೂಪದಲ್ಲಿ ಪಡೆದಿರುತ್ತದೆ.
ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವದ ಆಶಯಗಳನ್ನು ಫ್ರೆಂಚ್ ಸಂವಿಧಾನದಿಂದ , ಪಂಚವಾರ್ಷಿಕ ಯೋಜನೆಯ ಮಾದರಿಯನ್ನು ಸೋವಿಯತ್ ರಷ್ಯಾದಿಂದ , ಆಡಳಿತ ನಿರ್ದೇಶನಾ ತತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ ಹಾಗೂ ಸರ್ವೋಚ್ಚ ನ್ಯಾಯಾಲಯದ ನಡಾವಳಿಯ ನಿಯಮಗಳನ್ನು ಜಪಾನಿನಿಂದಲೂ ಪಡೆದುಕೊಂಡಿರುತ್ತದೆ.
ಹಲವು ದೇಶಗಳ ಸಂವಿಧಾನವನ್ನು ಅದಾಗಲೇ ಕೂಲಂಕಷವಾಗಿ ಅಧ್ಯಯನ ವನ್ನು ಮಾಡಿದ್ದ ನರಸಿಂಹರಾವ್ ಅವರು ಸರ್ಕಾರದ ಮನವಿಯ ಮೇರೆಗೆ , ಸಂವಿಧಾನದ ಸಂಬಂಧಿತ ತಮ್ಮ ಸ್ಥೂಲ ಕರಡನ್ನು ( Rough Draft ) ಸಿದ್ಧಪಡಿಸಿದ ತದನಂತರದಲ್ಲಿ ಅದನ್ನು ಕ್ರಿ.ಶ 1947 ರಲ್ಲಿ ಸಾಂವಿಧಾನಿಕ ಸಭೆಯ ಮುಂದಿಟ್ಟರು.
ನರಸಿಂಗರಾವ್ ಅವರು ಸಿದ್ಧಪಡಿಸಿದ್ದ ಸಂವಿಧಾನದ ಸ್ಥೂಲ ಕರಡಿನಲ್ಲಿ ( Rough Draft ) ಒಟ್ಟು 243 ವಿಧಿಗಳೂ ಮತ್ತು 13 ಅನುಚ್ಛೇದಗಳೂ ಇದ್ದವು. ಅದರಂತೆ ,
ನರಸಿಂಗರಾವ್ ಅವರು ಸಿದ್ಧಪಡಿಸಿದ ಇದೇ ಮೂಲ ಸ್ಥೂಲ ಕರಡನ್ನು ( Rough Draft ) ಮುಂದಿಟ್ಟುಕೊಂಡು , ಆದರ ಅನುಸಾರವಾಗಿ ಭಾರತ ಸಕಾ೯ರದ ಅಂದಿನ ಕಾನೂನು ಸಚಿವರು ಆಗಿದ್ದ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮರ್ಥ ಮುಂದಾಳತ್ವದಲ್ಲಿ ‘ ಸಂವಿಧಾನ ಕರಡು ರಚನಾ ಸಮಿತಿ ’ ಯನ್ನು ರಚಿಸುವ ಮೂಲಕವಾಗಿ ಆ ಸಂಬಂಧಿತ ಮೂಲ ಸ್ಥೂಲ ಕರಡನ್ನು ( Rough Draft ) ಚರ್ಚೆಗೆ ಒಳಪಡಿಸಿ , ಅದನ್ನು ತಿದ್ದುವ , ಪರಿಷ್ಕರಿಸುವ ಹಾಗೂ ಹಲವು ಹೆಚ್ಚಿನ ಹೊಸ ವಿಧಿಗಳನ್ನು ಅದಕ್ಕೆ ಸೇರಿಸಿದಂತೆ , ಸಂವಿಧಾನವನ್ನು ಬೆಳೆಸುವ ಕೆಲಸವನ್ನು ಆ ಸಮಿತಿಯು ಕೈಗೆತ್ತಿಕೊಂಡಿತು.
ಡಾ. ಬಿ. ಆರ್ ಅಂಬೇಡ್ಕರ್ ಅವರು ಕ್ರಿ.ಶ 1947 ರ ಆಗಸ್ಟ್ 29 ರಂದು ಭಾರತ ಸಂವಿಧಾನ ರಚನೆಯ ಕರಡು ಸಮಿತಿಯ ( Drafting Committee ) ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ಸರ್ ಬಿ. ಎನ್ ರಾವ್ ಅವರು ಆ ಸಂಬಂಧಿತ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಮತ್ತು ಅವರು ಆ ಸಮಿತಿಯಲ್ಲಿದ್ದ ಏಕೈಕ ಕನ್ನಡಿಗರೂ ಕೂಡ ಹೌದು !
ಭಾರತ ಸಂವಿಧಾನ ರಚನಾ ಸಮಿತಿಯ ( Drafting Committee ) ವತಿಯಿಂದ , ಸರ್ ಬಿ. ಎನ್ ರಾವ್ ಅವರು ಅದಾಗಲೇ ಸಿದ್ಧಪಡಿಸಿದ ಮೂಲ ಸ್ಥೂಲ ಕರಡು ( Rought Draft ) ಸಂವಿಧಾನಕ್ಕೆ ನಂತರದಲ್ಲಿ ಮತ್ತೆ ಹಲವು ಹೆಚ್ಚಿನ ಹೊಸ ವಿಧಿಗಳನ್ನು ಸೇರಿಸಲಾಯಿತು ಹಾಗೂ ಕೆಲವುಗಳ ಪರಿಷ್ಕರಣವನ್ನು ಮಾಡಲಾಯಿತು. ಆ ಸಂಬಂಧಿತ ಕ್ರೋಢೀಕೃತವಾದ ಸಂವಿಧಾನದ ಮೊದಲ ಕರಡು ಪ್ರತಿಯನ್ನು ಸಂಸತ್ತಿನಲ್ಲಿ ಸಾಂವಿಧಾನಿಕ ಸಭೆಯ ಮುಂದೆ ಮಂಡನೆಗಾಗಿ ಅದನ್ನು ಸಲ್ಲಿಸಿದಾಗ ಅದರಲ್ಲಿ ಒಟ್ಟು 315 ವಿಧಿಗಳು ಮತ್ತು 8 ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಸಾಂವಿಧಾನಿಕ ಸಭೆಯಲ್ಲಿ ಅದು ಮಂಡನೆಯಾಗಿ , ಆ ಪ್ರಕ್ರಿಯೆಯ ಪ್ರಕಾರದಲ್ಲಿ ಅದರ ಅನುಮೋದನೆಯನ್ನು ಪಡೆದು ಅಧಿಕೃತವಾಗಿ ಅಂಗೀಕಾರ ಗೊಳ್ಳುವ ವೇಳೆಗೆ ಅದರಲ್ಲಿ ಮತ್ತಷ್ಟು ಹೆಚ್ಚಿನ ಹೊಸ ವಿಧಿಗಳು ಸೇರ್ಪಡೆಯಾದಂತೆ , ಅಂತಿಮವಾಗಿ ಅವುಗಳ ಒಟ್ಟಾರೆ ಸಂಖ್ಯೆಯು 395 ಕ್ಕೆ ಏರಿತು. ಅಧಿಕೃತವಾಗಿ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕೃತಗೊಂಡ ಪ್ರಕಾರದಂತೆ , ಪ್ರತಿವಷ೯ವೂ ಕೂಡ ನವೆಂಬರ್ 26 ರಂದು ಸಂವಿಧಾನ ಅಂಗೀಕಾರದ ದಿನ ಎಂದು ಅದನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ರೀತಿಯಲ್ಲಿ ಭಾರತದ ಸಂವಿಧಾನವು , ಜಗತ್ತಿನ ಅತಿ ದೊಡ್ಡ ಸಂವಿಧಾನವು ಆಗಿರುತ್ತದೆ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿರುತ್ತದೆ.
ಅದರಂತೆಯೇ , ಭಾರತವು ಒಕ್ಕೂಟ ವ್ಯವಸ್ಥೆಯಲ್ಲಿ ಒಗ್ಗೂಡಿದಂತೆ ಗಣತಂತ್ರ ದಲ್ಲಿ ರೂಪುಗೊಂಡು , ಅದರ ಪ್ರತೀಕದ ಧ್ಯೋತಕವಾಗಿ , ಕ್ರಿ.ಶ 1950 ರ ಜನವರಿ 26 ರ ದೇಶದ ಆ ಸಂಬಂಧಿತ ಗಣರಾಜ್ಯ ದಿನದಂದು ದೇಶಕ್ಕೆ ಸಮಪ೯ಣೆಯಾದಂತೆ ಭಾರತದ ಸಂವಿಧಾನವನ್ನು ದೇಶದಾದ್ಯಂತ ಜಾರಿಗೊಳಿಸುವ ಮೂಲಕವಾಗಿ ಅದರ ಅನುಷ್ಠಾನವು ಆಗಿರುತ್ತದೆ ಹಾಗೂ ಅದರಂತೆ , ಆ ಸಂಬಂಧಿತ ದಿನವನ್ನು ಸಂವಿಧಾನ ಅನುಷ್ಠಾನ ದಿನ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಹೆಮ್ಮೆಯ ಕನ್ನಡಿಗ ಸರ್ ಬಿ.ಎನ್. ರಾವ್ ಅವರನ್ನು ಭಾರತ ಸಂವಿಧಾನದ ಪ್ರವರ್ತಕ ( Pioneer of the Constitution of India ) ಎಂದೇ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಕೂಡ ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ತಿಳಿದಿರುತ್ತದೆ. ಆದರೆ ಅದೇ ಸಂವಿಧಾನ ರಚನೆಯಲ್ಲಿ ತನ್ನ ಪ್ರಮುಖ ಹಾಗೂ ಪ್ರಧಾನವಾದ ಪಾತ್ರವನ್ನು ವಹಿಸಿದ ಮತ್ತೊಬ್ಬ ವ್ಯಕ್ತಿ , ಹೆಮ್ಮೆಯ ಕನ್ನಡಿಗರಾದ ಸರ್ ಬಿ. ಎನ್. ರಾವ್ ರವರ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿರುವುದೇ ಇಲ್ಲ. ಹಾಗಾಗಿ ಇದೊಂದು ಬಹಳ ಸೋಜಿಗದ ಹಾಗೂ ವಿಪಯಾ೯ದ ಸಂಗತಿಯು ಆಗಿರುತ್ತದೆ ಅಲ್ಲವೇ……!!
” ಸಂವಿಧಾನ ರಚನೆಯಲ್ಲಿ ನನಗೆ ಸಂದ ಈ ಗೌರವವು ಕೇವಲ ನನಗೊಬ್ಬನಿಗೇ ಸೀಮಿತವಾದುದಲ್ಲ , ಈ. ಗೌರವವು , ಕರಡು ರಚನಾ ಸಮಿತಿಗೆ ಸಂವಿಧಾನ ಸಲಹೆಗಾರರಾಗಿದ್ದು ( Constitutional Advisor ) , ಸಂವಿಧಾನ ಸಭೆಯ ಪರಿಶೀಲನೆಗಾಗಿ ಕಚ್ಚಾ ಕರಡು ( Rough Draft ) ಸಂವಿಧಾನವನ್ನು ಸಿದ್ಧಪಡಿಸಿಕೊಟ್ಟ ಸರ್ ಬಿ. ಎನ್. ರಾವ್ ಅವರಿಗೆ ಸಲ್ಲಬೇಕು “.
ಹೀಗೆಂದವರು ಬೇರೆ ಯಾರೋ ಅಲ್ಲ. ಸ್ವತಃ ಸಂವಿಧಾನ ಶಿಲ್ಪಿ ಎಂದೇ ಹೆಸರಾದ ಡಾ. ಬಿ. ಆರ್. ಅಂಬೇಡ್ಕರ್ ಅವರು. ಇದು ಅವರು ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದಂತಹ ಮಾತು ಆಗಿರುತ್ತದೆ !
ಇದರ ಸಂಬಂಧಿತ ಈ ಮಹತ್ವದ ವಿಚಾರವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು – ಸಂಪುಟ 13 ಪುಸ್ತಕದಲ್ಲಿನ ಪುಟಸಂಖ್ಯೆ 522 ರಲ್ಲಿ ದಾಖಲಾಗಿರುತ್ತದೆ.
ಆದಾಗ್ಯೂ , ಭಾರತ ಸಂವಿಧಾನವನ್ನು ಸಂಪೂರ್ಣ ಹಾಗೂ ಪರಿಪೂರ್ಣವಾದಂತೆ ರಚಿಸಿದವರು ಕೇವಲ ಒಬ್ಬರು ಮಾತ್ರ ಆಗಿರುತ್ತಾರೆ ಎಂಬ ಪರಿಕಲ್ಪನೆಯು ಬೇರೂರಿ ಅದು ಬೆಳೆದು ಬಂದಿರುವಂತೆ , ಪಸ್ತುತದ ಕಾಲಘಟ್ಟದಲ್ಲಿ ಅದರಂತೆಯೇ ಅದು ತಿಳಿದು ಬರುತ್ತದೆ. ಬಹುಶಃ ಕಾಲಕಾಲಕ್ಕೆ ಜನರನ್ನು ತಮಗೆ ಬೇಕಾದಂತೆ ನಡೆಸಿಕೊಂಡು ಬಂದಂತಹ ಅವ್ಯವಸ್ಥಿತವಾದಂತಹ ಸ್ಥಿತ್ಯಂತರದ ರಾಜಕೀಯ ವ್ಯವಸ್ಥೆಯ ಆಧರಿತವಾದ ಅದರ ಪ್ರಭಾವಗಳು ಹಾಗೂ ಪ್ರೇರಣೆಯ ರೂಪದಲ್ಲಿನ ಸ್ಥಿತಿಗತಿಗಳು ಈ ರೀತಿಯ ವಸ್ತುಸ್ಥಿತಿಯ ಆಧರಿತದ ಚರಿತ್ರೆಗೆ ಕಾರಣೀಭೂತವು ಆಗಿರುತ್ತದೆ ಎನ್ನಬಹುದಾಗಿರುತ್ತದೆ. ಹಾಗೆಯೇ , ಸಂವಿಧಾನವು ಅಂಗೀಕೃತವಾದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿಯೂ ಕೂಡ ಅದರ ಮೂಲ ಸ್ಥೂಲ ಕರಡನ್ನು ( Rough Draft ) ತಯಾರಿಸಿಕೊಟ್ಟ ಇಂತಹ ಮಹಾನ್ ಮೇಧಾವಿಯು ಯಾರಿಗೂ ಕೂಡ ನೆನಪಾಗಿಲ್ಲವೆಂದರೆ , ಅದು ಈ ಗಣರಾಜ್ಯದ ಅಣಕವು ಆಗಿರುತ್ತದೆ ಎಂದು ಪರಿಭಾವಿಸಬಹು ದಾಗಿರುತ್ತದೆ.
ಸರ್ ಬಿ. ಎನ್ ರಾವ್ ರವರ ಅಂತರ ರಾಷ್ಟ್ರೀಯ ಸಂಬಂಧಿತ ಸೇವೆಗಳು :
ನರಸಿಂಗರಾವ್ ಅವರು ಭಾರತದ ಸಂವಿಧಾನದ ಸಂಬಂಧಿತ ತಮ್ಮ ಕೆಲಸ – ಕಾಯ೯ಗಳನ್ನು ನಿವ೯ಹಿಸಿದಂತೆ ಅದನ್ನು ಪೂಣ೯ಗೊಳಿಸಿದ ತದನಂತರ ದಲ್ಲಿ , ಮುಂದೆ ಅವರು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿ ಆಗಿಯೂ ಕೂಡ ಆಯ್ಕೆಯಾದರು.
ಇದೇ ಸಮಯದಲ್ಲಿ ಬರ್ಮಾ ದೇಶವು , ಇವರಲ್ಲಿ ತನ್ನ ದೇಶಕ್ಕಾಗಿ ಸಂವಿಧಾನದ ಕರಡನ್ನು ತಯಾರಿಸಿ ಕೊಡುವಂತೆ ಕೇಳಿಕೊಂಡಿತು. ಅದರಂತೆ , ಆ ಸಂಬಂಧಿತ ಕೆಲಸವನ್ನೂ ಕೂಡ ನರಸಿಂಗರಾವ್ ಅವರು ಪೂರೈಸಿಕೊಟ್ಟರು. ಇದು ಸಂವಿಧಾನದ ಪ್ರಮುಖ ವಿಷಯಗಳ ಸಂಬಂಧಿತ ಸರ್ ಬಿ. ಎನ್ ರಾವ್ ಅವರು ಹೊಂದಿದ್ದಂತಹ ಬಹಳ ಆಳವಾದ ಮತ್ತು ಅಗಾಧವವಾದ ಜ್ಞಾನಭಂಡಾರ ಹಾಗೂ ಪ್ರೌಢಿಮೆಗಳನ್ನು ಎತ್ತಿ ತೋರಿಸುವ ಪ್ರತೀಕದ ನಿದಶ೯ವು ಆಗಿರುತ್ತದೆ.
ಮುಂದೆ ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾ ಹೋಗಿ ಕ್ರಿ.ಶ 1950 ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಸುವಣ೯ ಅವಕಾಶವು ಒದಗಿಬಂದಿತ್ತು. ಆದರೆ , ಅಂದಿನ ಸಕಾ೯ರದ ಕೆಲವು ನಿಧಾ೯ರಗಳಿಂದ ಅದು ಕೈಪ್ಪಿತು – ಅದರಿಂದ ಇದುವರೆಗೆ ಸುಮಾರು ಎಪ್ಪತ್ತಮೂರು ವರ್ಷಗಳೇ ಕಳೆದರೂ ಕೂಡ ನಮ್ಮ ದೇಶಕ್ಕೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
ಕ್ರಿ.ಶ. 1952 ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯು ಆಗುವ ಅವಕಾಶವು ಬಿ. ಎನ್. ರಾವ್ ಅವರಿಗೆ ಕೂದಲೆಳೆಯಲ್ಲಿ ಕೈತಪ್ಪಿಹೋಯಿತು. ಆದರೇನಂತೆ , ಅವರು ಹೇಗ್ ನ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ , ಆ ಹುದ್ದೆಯಲ್ಲಿ ಬಹುಕಾಲ ಮುಂದುವರೆ ಯಲು ಅವರಿಗೆ ಅದೃಷ್ಟವು ಇರಲಿಲ್ಲ ಎಂದು ತೋರುತ್ತದೆ. ಕ್ರಿ. ಶ 1953 ರ ನವೆಂಬರ್ 30 ರಂದು ಬೆನಗಲ್ ನರಸಿಂಗರಾವ್ ಅವರು ಜ್ಯೂರಿಕ್ ನಲ್ಲಿ ತಮ್ಮ 66 ನೆಯ ವಯಸ್ಸಿನಲ್ಲಿ ನಿಧನರಾಗಿ , ಈ ಇಹಲೋಕವನ್ನು ಅಗಲಿರುತ್ತಾರೆ.
ಸರ್ ಬಿ. ಎನ್ ರಾವ್ ಅವರ ಸಹೋದರರು :
ನರಸಿಂಗರಾವ್ ಅವರ ಉಳಿದಿಬ್ಬರು ಸೋದರರೂ ಕೂಡ ಮಹಾರಥಿಗಳೇ ಆಗಿದ್ದವರು ಆಗಿರುತ್ತಾರೆ . ಅವರ ಮೊದಲ ಸಹೋದರರಾದ ಬಿ. ರಾಮರಾವ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು.
ಎರಡನೆಯ ಸಹೋದರರಾದ ಬಿ. ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು ಆಗಿದ್ದರು , ಜೊತೆಗೆ ಸಂಸದರೂ ಕೂಡ ಆಗಿದ್ದವರು ಆಗಿರುತ್ತಾರೆ ಹಾಗೂ ಅವರು ತಮ್ಮ ರಾಜಕೀಯ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ನಿವೃತ್ತಿಯನ್ನು ಘೋಷಿಸಿದಂತೆ , ತಮ್ಮ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರವಾದ ಮತ್ತು ಅಪರೂಪದ ವ್ಯಕ್ತಿತ್ವದ ರಾಜ ಕಾರಣಿಯು ಆಗಿದ್ದವರು ಆಗಿರುತ್ತಾರೆ.
ಉಪಸಂಹಾರ :
ಕನಾ೯ಟಕದಲ್ಲಿನ ಕಾರ್ಕಳದ ಸಮೀಪದ ಬೆನಗಲ್ಲಿನಂತಹ ಒಂದು ಪುಟ್ಟ ಹಳ್ಳಿ ಯಿಂದ ಬಂದು ವಿಶ್ವಸಂಸ್ಥೆ , ಅಂತರ ರಾಷ್ಟ್ರೀಯ ನ್ಯಾಯಾಲಯಗಳಂತಹ ಅತ್ಯುನ್ನತವಾದ ಎತ್ತರಗಳನ್ನು ಏರಿದಂತೆ, ಅತ್ಯಮೂಲಾಗ್ರ ನ್ಯಾಯಶಾಸ್ತ್ರವೇತ್ತರಾಗಿ ಮತ್ತು ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ ಹಾಗೂ ಭಾರತದ ಸಂವಿಧಾನವನ್ನು ರಚಿಸುವಲ್ಲಿ ನೆರವಾಗುವ ಅವಕಾಶವನ್ನು ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿರುವುದಿಲ್ಲ.
ಹಾಗೆಯೇ , ಸಂಸತ್ತಿನ ಹೊರಗಡೆಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಸರ್ ಬೆನಗಲ್ ನರಸಿಂಗರಾವ್ ಅವರದು ಆಗಿರುತ್ತದೆ.
ಹಾಗೆಯೇ , ದೇಶಕ್ಕೆ ತಮ್ಮದೇ ಆದಂತಹ ಅತ್ಯಮೂಲಾಗ್ರವಾದ ಸೇವೆಯನ್ನು ನೀಡಿದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾನೂನು ತಜ್ಞರಾಗಿ ಅದಕ್ಕಾಗಿ ತಮ್ಮದೇ ಆದಂತಹ ಸೇವೆಯನ್ನು ಸಲ್ಲಿಸಿರುವ ಇಂತಹ ಧೀಮಂತ ವ್ಯಕ್ತಿತ್ವದ ಹಾಗೂ ತೀರಾ ಸರಳ ಸ್ವಭಾವದ , ಅದಲ್ಲದೆ ನಮ್ಮ ಕರ್ನಾಟಕದ ಹೆಮ್ಮೆಯ ಕನ್ನಡಿಗರಾದ ಈ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರುನೆನಪಿಸುವ ಕೆಲಸ – ಕಾಯ೯ವನ್ನು ಯಾವ ಜನಪ್ರತಿನಿಧಿ ನಾಯಕರುಗಳು ಹಾಗೂ ಎಲ್ಲಾ ಮುಂದಾಳುಗಳು ಇದುವರೆವಿಗೂ ಕೂಡ ಮಾಡಿರುವುದಿಲ್ಲ ಎನ್ನುವುದು ಅವರುಗಳ ಮತ್ತು ನಮ್ಮಗಳ ಹಾಗೂ ಎಲ್ಲರುಗಳ ‘ ಅಭಿಮಾನ ಶೂನ್ಯತೆಯನ್ನು’ ಎತ್ತಿ ತೋರಿಸುವಂತಿರುತ್ತದೆ.
ಕೊನೆಯಪಕ್ಷ , ಈಗಲಾದರೂ ಕೂಡ ನಮ್ಮ ಜನಪ್ರತಿನಿಧಿ ನಾಯಕರುಗಳು ಹಾಗೂ ಎಲ್ಲಾ ಮುಂದಾಳುಗಳು ಈ ಕಾರ್ಯವನ್ನು ಮಾಡಿ ಒಬ್ಬ ಮಹಾನ್ ಮೇಧಾವಿ ಸತ್ಪುರುಷನನ್ನು ಹೊಸಪೀಳಿಗೆಗೆ ಪರಿಚಯಿಸುವ ಕಾರ್ಯ ವನ್ನು ಮಾಡಲಿ ಎಂದು ಆಶಿಸಬಹು ದಾಗಿರುತ್ತದೆ.
ಅದರಂತೆಯೇ , ಕನ್ನಡ – ಕನ್ನಡನಾಡು ಮತ್ತು ಕನ್ನಡಿಗರ ಹಿರಿಮೆ – ಗರಿಮೆ – ಹೆಮ್ಮೆಗಳನ್ನು ಎಲ್ಲೆಡೆಗಳಲ್ಲಿಯೂ ಸಾರುವ ನವೆಂಬರ್ ತಿಂಗಳಿನ ಈ ಶುಭ ಸಂದರ್ಭದಲ್ಲಿ ಹಾಗೂ ನವೆಂಬರ್ 26 ರಂದು ಭಾರತದಾದ್ಯಂತ ಸಂವಿಧಾನ ಅಂಗೀಕಾರದ ದಿನವನ್ನು ( Constitution Day ) ಆಚರಿಸುತ್ತಿರುವ ಹಿನ್ನೆಲೆಯಲ್ಲಿ , ಭಾರತೀಯ ಸಂವಿಧಾನ ರಚನೆಗೆ ಅಡಿಗಲ್ಲನ್ನು ಹಾಕಿದ ಹೆಮ್ಮೆಯ ಕನ್ನಡಿಗ ಸರ್ ಬಿ. ಎನ್ ರಾವ್ ಅವರ ಸಾಧನೆಗಳನ್ನು ನೆನೆಯಲೇ ಬೇಕಾಗಿರುವುದು ಪ್ರತಿಯೊಬ್ಬ ನೈಜ ಕನ್ನಡಿಗನ ಆದ್ಯಕರ್ತವ್ಯವು ಆಗಬೇಕಾ ಗಿರುತ್ತದೆ……!!
ಜೈಹಿಂದ್ – ಜೈಕನಾ೯ಟಕ
———————————————————–
ಮಾಹಿತಿಗಳ ಸಂಗ್ರಹ ಮತ್ತು ಲೇಖನ : ವಿ. ಪಿ. ಆರಾಧ್ಯ – ಮೈಸೂರು
