ದೃಷ್ಟಿಹೀನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಮತ್ತು ಅವರ ಸ್ವಾವಲಂಬನೆಯನ್ನು ಹೆಚ್ಚಿಸಲು ನಾರಾಯಣ ನೇತ್ರಾಲಯದ ‘ಬಡ್ಸ್ ಟು ಬ್ಲಾಸಮ್ಸ್’ (Buds to Blossoms) ವಿಭಾಗವು, ‘SHG ಟೆಕ್ನಾಲಜೀಸ್’ ಸಹಯೋಗದೊಂದಿಗೆ ‘ಸ್ಮಾರ್ಟ್ ವಿಷನ್ ಗ್ಲಾಸಸ್ ಅಲ್ಟ್ರಾ’ (Smart Vision Glasses Ultra) ಎಂಬ ಅತ್ಯಾಧುನಿಕ ಸ್ಮಾರ್ಟ್ ಕನ್ನಡಕವನ್ನು ಅಭಿವೃದ್ಧಿಪಡಿಸಿದೆ.
ಸಾಮಾನ್ಯ ಕನ್ನಡಕದಂತೆ ಆಕರ್ಷಕ ವಿನ್ಯಾಸ ಹೊಂದಿರುವ ಈ ಸಾಧನವು ಕೇವಲ ಫ್ಯಾಷನ್ ಗಾಗಿ ಅಲ್ಲ, ಬದಲಿಗೆ ಇದೊಂದು ಕೃತಕ ಬುದ್ಧಿಮತ್ತೆಯಿಂದ (Artificial Intelligence – AI) ಚಾಲಿತವಾಗಿರುವ ಶಕ್ತಿಶಾಲಿ ಸಹಾಯಕ ಸಾಧನವಾಗಿದೆ. ದೃಷ್ಟಿಹೀನ ವ್ಯಕ್ತಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಪ್ರಮುಖ ಸವಾಲುಗಳಿಗೆ ಇದು ಪರಿಹಾರ ಒದಗಿಸಲಿದೆ.
ಸ್ಮಾರ್ಟ್ ಕನ್ನಡಕದಲ್ಲಿ ಏನಿದೆ ವಿಶೇಷತೆ?:
ಈ ಸ್ಮಾರ್ಟ್ ಕನ್ನಡಕವು ಬಹು ಭಾಷೆಗಳಲ್ಲಿ ಬರೆದ ಪಠ್ಯವನ್ನು ಓದಿ ಬಳಕೆದಾರರಿಗೆ ಕೇಳುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಕೈಯಲ್ಲಿರುವ ಕರೆನ್ಸಿ ನೋಟುಗಳ ಮೌಲ್ಯವನ್ನು ನಿಖರವಾಗಿ ಗುರುತಿಸುತ್ತದೆ. ದಾರಿಯಲ್ಲಿ ಎದುರಾಗುವ ವಸ್ತುಗಳು, ಅಡೆತಡೆಗಳನ್ನು ಪತ್ತೆಹಚ್ಚಿ ಎಚ್ಚರಿಸುವುದಲ್ಲದೆ, ಎದುರಿರುವ ವ್ಯಕ್ತಿಗಳ ಮುಖಚಹರೆಯನ್ನು ಗುರುತಿಸಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ದೃಷ್ಟಿಹೀನರು ಯಾವುದೇ ಪರಾವಲಂಬನೆ ಇಲ್ಲದೆ ಸುತ್ತಮುತ್ತಲಿನ ಪರಿಸರದಲ್ಲಿ ಸಂಚರಿಸಲು ಇದು ಮಾರ್ಗದರ್ಶಿಯಾಗಿದೆ.
ಕೈಗೆಟಕುವ ದರದಲ್ಲಿ ಲಭ್ಯ:
ಇದು ಹೆಮ್ಮೆಯ ‘ಮೇಡ್ ಇನ್ ಇಂಡಿಯಾ’ ಉತ್ಪನ್ನವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ಬಗೆಯ ದುಬಾರಿ ತಂತ್ರಜ್ಞಾನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದೆ. ನಾರಾಯಣ ನೇತ್ರಾಲಯದ ನಿರ್ದೇಶಕ ನರೇನ್ ಶೆಟ್ಟಿ ಅವರು ಮಾತನಾಡಿ, “ದೃಷ್ಟಿಹೀನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸುವುದು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ,” ಎಂದು ತಿಳಿಸಿದ್ದಾರೆ. ಈ ಸ್ಮಾರ್ಟ್ ಕನ್ನಡಕವು ದೃಷ್ಟಿಹೀನರ ಸಮುದಾಯಕ್ಕೆ ವರದಾನವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಾಘವೇಂದ್ರ ಅಡಿಗ ಎಚ್ಚೆನ್
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.