ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ರಿಲೀಸ್ ಆಗಿದೆ. ಹೋಳಿ ಹಬ್ಬಕ್ಕೂ ಒಂದು ದಿನ ಮೊದಲು ಈ ಸಾಂಗ್ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಈ ಹಾಡು ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಯಶ್ ಹಾಗೂ ಕಿಯಾರ ಅವರನ್ನು ಒಳಗೊಂಡ ಹಾಡು ತಬಾಹಿ ರೊಮ್ಯಾಂಟಿಕ್ ಮೆಲೊಡಿಯಾಗಿ ಈ ಹಾಡು ಬಂದಿದೆ. ಹಾಡಿನ ಸಾಹಿತ್ಯ ಕೇಳಿದರೆ ಇದೊಂದು ಪಕ್ಕಾ ರಾ-ರೊಮ್ಯಾಂಟಿಕ್ ಹಾಡೆನ್ನುವುದು ಗೊತ್ತಾಗುತ್ತದೆ. ಅದೇ ರೀತಿ ತೀರಾ ಮೆಲೊಡಿಯಾಗಿರದೆ, ತೀರಾ ಅಬ್ಬರವೂ ಅಲ್ಲದ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ.
ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿ ಹಾಡನ್ನು ಹಾಡಿದ್ದಾರೆ. ಸದ್ಯ ಲಿರಿಕಲ್ ಸಾಂಗ್ ಮಾತ್ರ ಬಿಡುಗಡೆ ಕಂಡಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಮ್ಯೂಸಿಕ್ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಚಿತ್ರದಲ್ಲಿ ಒಟ್ಟೂ ಆರು ಹಾಡುಗಳು ಇವೆ ಎನ್ನಲಾಗಿದೆ. ಈ ಸಿನಿಮಾಗಾಗಿ ಐದು ಸಂಗೀತ ಸಂಯೋಜಕರು ಕೆಲಸ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಒಂದು ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ತಬಾಹಿ ಪದದ ಅರ್ಥ ಏನು?
ತಬಾಹಿ ಎನ್ನುವುದು ಒಂದು ಹಿಂದಿ ಪದವಾಗಿದ್ದು.
HOTLatest
3 ಜನ ಸಾಧಕರಿಗೆ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಪ್ರಕಟ
ನಾಡಿನ ಹೆಸರಾಂತ ವಿಶ್ವವಿದ್ಯಾಯವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೂರು ಜನ ಸಾಧಕರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.ಚಿಂತಕ, ಶಿಕ್ಷಣ ತಜ್ಞ ಪ್ರೊ.ಜಿ.ರಾಮಕೃಷ್ಣ, ಶತಾಯುಷಿ ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ನಿವೃತ್ತ ಸಾರಿಗೆ TOXIC : ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ
ಕೊನೆಗೂ ಅಂತ್ಯವಾಗಿದೆ. ‘ಟಾಕ್ಸಿಕ್’ (Toxic) ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ.ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ ಎಂಬ ಸುದ್ದಿಯ ನಡುವೆಯೇ, ಚಿತ್ರತಂಡ ದಿಢೀರ್ ಟೀಸರ್ ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಸಿದ್ದರಾಮಯ್ಯ ಸೂಚನೆ
ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಗಿದೆ. ವಿಮರ್ಶಕರಿಂದ ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಸಿನಿಮಾಗೆ 