ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಗಮನಿಸಬೇಕಾದ 5 ಆರೋಗ್ಯ ಪರಿಸ್ಥಿತಿಗಳು
ಮಳೆಗಾಲದಲ್ಲಿ ಭೂಮಿ ತಂಪಾಗುತ್ತದೆ. ಮನಸ್ಸೂ ತಂಪಾಗುತ್ತದೆ. ಬೇಸಿಗೆಯ ಶಾಖದಿಂದ ಉಂಟಾದ ಬಳಲಿಕೆಗೆ ಪರಿಹಾರ ಕೊಡುತ್ತದೆ. ಈ ತಂಪು ಸಮಯದಲ್ಲಿ ಬಿಸಿ ಚಹಾ, ಪಕೋಡ ಮತ್ತು ಲಾಂಗ್ ಡ್ರೈವ್ ಗಳಿಗೆ ಹೋಗಬೇಕು ಎಂಬ ಆಸೆ ಮೊಳೆಯುತ್ತದೆ. ಮಳೆಗಾಲ ಎಷ್ಟು ಆಹ್ಲಾದವನ್ನು ತರುತ್ತದೋ ಅಷ್ಟೇ ಸವಾಲುಗಳನ್ನೂ ಮುಂದಿಡುತ್ತದೆ. ಟ್ರಾಫಿಕ್ ಕಿರಿಕಿರಿ ಉಂಟಾಗುತ್ತದೆ, ಬೀದಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಮತ್ತು ಮಳೆಗಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗ್ಯಾಸ್ಟ್ರೋ ಇಂಟೆಸ್ಟೈನಲ್ (ಜಠರಗರುಳು) ಗೆ ಸಂಬಂಧಿಸಿದ ಶೀತ ಮತ್ತು ಜ್ವರ ಉಂಟಾಗುತ್ತದೆ. ಜೊತೆಗೆ ಮಳೆಗಾಲದಲ್ಲಿ ವಾಹಕಗಳಿಂದ ಹರಡುವ ಕಾಯಿಲೆಗಳು […]