ಮೈಸೂರು ಸಂಸ್ಥಾನದ ದಕ್ಷರಾದ ಅರಸರು , ಕನ್ನಡದ ಭೋಜ ಎಂದು ಖ್ಯಾತರು , ಉತ್ತಮ ಆಡಳಿತಗಾರ ಹಾಗೂ ಸಾಹಿತ್ಯ , ಕಲೆ , ಸಂಗೀತ , ವಾಸ್ತುಶಿಲ್ಪ ಪೋಷಕರು -…..ಇನ್ನೂ ಮುಂತಾದವುಗಳ ಸಂಬಂಧಿತವಾದಂತೆ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿದ ಮೈಸೂರು ಸಂಸ್ಥಾನದ ಹೆಮ್ಮೆಯ ಮನ್ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸಂಸ್ಮರಣೆಗಳು.
1799 ರಲ್ಲಿ ಟಿಪ್ಪು ಸುಲ್ತಾನನ ಮರಣಾ ನಂತರ ಇವರು ಪಟ್ಟಕ್ಕೆ ಏರಿದಾಗ ಅವರ ವಯಸ್ಸು ಇನ್ನೂ ಕೇವಲ ಐದು ( 5 ) ವರ್ಷದ ಅಪ್ರಾಪ್ತವಾದ ವಯಸ್ಸು. ರಾಜಧಾನಿಯನ್ನು ಶ್ರೀರಂಗ ಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿ ಇಂದಿನ ಮೈಸೂರು ನಗರ ನಿರ್ಮಾಣಕ್ಕೆ ಮೂಲ ಅಡಿಪಾಯವನ್ನು ಹಾಕಿದವರು ಇವರೇ ಆಗಿರುತ್ತಾರೆ – ಸುಮಾರು ಎಪ್ಪತ್ತು ( 70 ) ವರ್ಷಗಳ ಕಾಲದ ತಮ್ಮ ಸುದೀಘ೯ವಾದ ಆಡಳಿತದಲ್ಲಿ ಹೆಮ್ಮೆಯ ಮೈಸೂರು ಸಂಸ್ಥಾನವನ್ನು ಕಲೆ , ಸಂಗೀತ , ಸಂಸ್ಕೃತಿಗಳ ತವರೂರ ನ್ನಾಗಿ ಮಾಡಿದ ಹೆಗ್ಗಳಿಕೆಯು ಇವರದು ಆಗಿರುತ್ತದೆ.
ಅತ್ತಿಗುಪ್ಪೆಯೊಂದಿಗೆ ಮೈಸೂರು ಅರಸರ ಅವಿನಾಭಾವ ನಂಟು :
ಮಂಡ್ಯ ಜಿಲ್ಲೆಯ ಎರಡನೆಯ (2) ಅತಿ ದೊಡ್ಡ ತಾಲ್ಲೂಕು ಎಂದು ಗುರುತಿಸಿ ಅದರಂತೆ ಹೆಸರಾಗಿರುವ – ಬಹಳ ಹಿಂದಿನ ಕಾಲನಿಂದಲೂ ಕ್ರಿ.ಶ 1891ರ ವರೆವಿಗೂ ಕೂಡ ಅತ್ತಿಗುಪ್ಪೆ ಎಂದೇ ಕರೆಯಲಾಗುತ್ತಿದ್ದ ಕೆ. ಆರ್ ಪೇಟೆಗೂ ಮೈಸೂರು ಅರಸರಾದ , ಕಲೆ – ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ಕನ್ನಡದ ಭೋಜ ಎಂದು ಬಿರುದಾಂಕಿತರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೂ ಬಹಳ ಅವಿನಾಭಾವವಾದ ಸಂಬಂಧವು ಇತ್ತು. ಅವರು ಮೇಲುಕೋಟೆಗೆ ಹೋಗಬೇಕಾದಾಗದೆಲ್ಲಾ ಅತ್ತಿಗುಪ್ಪೆಯ ಮಾಗ೯ವಾಗಿಯೇ ತಮ್ಮ ಪ್ರಯಾಣವನ್ನು ಮಾಡುತ್ತಿದ್ದರು ಹಾಗೂ ಮಾದಾಪುರದ ದೇವೀರಮ್ಮಣ್ಣಿ ಎಂಬುವವರನ್ನು ತಮ್ಮ ಉಪಪತ್ನಿಯಾಗಿ ಸ್ವೀಕರಿಸಿದ್ದರು. ಜಾಗಿನಕೆರೆಯಲ್ಲಿ ಯಾವಾಗಲೂ ಅವರು ತಂಗುತ್ತಿದ್ದರು. ಅತ್ತಿಗುಪ್ಪೆಯ ಕಿಕ್ಕೇರಿ , ಹೊಸಹೊಳಲು ಮತ್ತು ಅಕ್ಕಿಹೆಬ್ಬಾಳು ಇನ್ನೂ ಮುಂತಾದ ಊರುಗಳೊಂದಿಗೆ ತಮ್ಮ ನಿರಂತರವಾದ ಸಂಪಕ೯ವನ್ನು ಹೊಂದಿದ್ದರು. ತಮ್ಮ ಉಪಪತ್ನಿಯ ಉತ್ಕಟವಾದ ಆಸೆಯಂತೆ ಅತ್ತಿಗುಪ್ಪೆಯ ದೊಡ್ಡಕೆರೆಯನ್ನು ಜೀಣೋ೯ದ್ದಾರಗೊಳಿಸಿ , ಅದಕ್ಕೆ ದೇವೀರಮ್ಮಣ್ಣಿ ಕೆರೆ ಎಂದು ನಾಮಕರಣವನ್ನು ಮಾಡಿದರು. ಇದಲ್ಲದೆಯೇ , ತಾಲ್ಲೂಕಿನ ವಿವಿಧೆಡೆಗಳಲ್ಲಿ ಕೆರೆ – ಕಟ್ಟೆಗಳ ನಿಮಾ೯ಣಕ್ಕೆ ನೆರವಾಗಿರು ತ್ತಾರೆ.
ಮೈಸೂರಿನ ಮಹಾರಾಜರು ಅತ್ತಿಗುಪ್ಪೆಯ ಕಿಕ್ಕೇರಿ , ಹೊಸಹೊಳಲು , ಅಕ್ಕಿಹೆಬ್ಬಾಳು ಇನ್ನೂ ಮುಂತಾದ ಊರುಗಳೊಂದಿಗೆ ತಮ್ಮ ನಿರಂತರವಾದ ಸಂಪಕ೯ವನ್ನು ಹೊಂದಿದ್ದರು. ಇಲ್ಲಿ ತಯಾರಾಗುತ್ತಿದ್ದಂತಹ ರೇಷ್ಮೆಯ ನೇಯ್ಗೆ ಬಟ್ಟೆಗಳು ಅವರಿಗೆ ತುಂಬಾ ಇಷ್ಟವಾಗಿರುತ್ತಿದ್ದವು. ಹೊಸ ಹೊಳಲಿನ ಸಾಹುಕಾರರಾದ ಶ್ರೀ ದುಂಡು ಶೆಟ್ಟರೊಂದಿಗೆ ಮಹಾರಾಜರಿಗೆ ಯಾವಾ ಗಲೂ ಕೂಡ ಬಹಳ ನಿಕಟವಾದ ಸ್ನೇಹ ವಿತ್ತು ಮತ್ತು ಅತ್ತಿಗುಪ್ಪೆಗೆ ಹಲವು ಅಭಿವೃದ್ಧಿಯ ಕೆಲಸ – ಕಾಯ೯ಗಳು ನಡೆದಾಗ ಹೊಸಹೊಳಲಿನ ಸಾಹುಕಾರರು ಮೈಸೂರು ಮಹಾರಾಜರ ಬೊಕ್ಕಸಕ್ಕೆ ತಮ್ಮ ದಾನದ ರೂಪದಲ್ಲಿ ಹಣವನ್ನು ನೀಡುತ್ತಿದ್ದರು ಎಂಬ ಉಲ್ಲೇಖಿತಗಳು ದೊರೆಯುತ್ತವೆ.
ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಸವಿನೆನಪುಗಳು ಶಾಶ್ವತವಾಗಿ ಉಳಿಯುವಂತೆ – ನಿತ್ಯ ಸಂಸ್ಮರಣೆಯ ಧ್ಯೋತಕವಾದಂತೆ , ಅತ್ತಿಗುಪ್ಪೆ ಎಂಬ ಹೆಸರನ್ನು ಕ್ರಿ. ಶ 1891 ರಲ್ಲಿ ಅವರ ವಧ೯ಂತಿಯ ಅಂಗವಾಗಿ ಕೃಷ್ಣರಾಜಪೇಟೆ ಎಂದು ಬದಲಾಯಿಸಿ , ಅದರಂತೆ ಮರುನಾಮಕರಣವನ್ನು ಮಾಡ ಲಾಗಿರುತ್ತದೆ. ಅಂದಿನಿಂದಲೂ ಅದು ಕೆ. ಆರ್ ಪೇಟೆ ಎಂದು ಕರೆಯಲ್ಪಡುತ್ತಿ ರುತ್ತದೆ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಲಘಟ್ಟದಲ್ಲಿ ಅಕ್ಕಿಹೆಬ್ಬಾಳಿನ ಸೇತುವೆ ಸೇರಿದಂತೆ ರಸ್ತೆ , ಆಸ್ಪತ್ರೆ , ಶಾಲೆ , ಧಮ೯ಛತ್ರ , ದೇವಾಲಯಗಳು ಇನ್ನೂ ಮುಂತಾದವುಗಳ ಅಭಿವೃದ್ಧಿ ಕೆಲಸ – ಕಾಯ೯ಗಳು ನಡೆದಾಗ ಇಲ್ಲಿನವರು ಅವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಹಾಗಾಗಿ ಕೆ. ಆರ್ ಪೇಟೆ ಎಂದರೆ ಮಹಾರಾಜರಿಗೆ ಅತ್ಯಂತ ಬಹಳವಾದ ಪ್ರೀತಿಯು ಇತ್ತು. ಇದರ ಪರಿಣಾಮವಾದಂತೆ ಆ ಕಾಲದಲ್ಲಿಯೇ ಕೆ. ಆರ್ ಪೇಟೆ , ಹೊಸಹೊಳಲು , ಅಕ್ಕಿಹೆಬ್ಬಾಳು , ಕಿಕ್ಕೇರಿ , ಸಾಸಲು , ಶೀಳನೆರೆ , ಸಂತೆಬಾಚಹಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಸಹಕಾರ ಸಂಘಗಳ ಬೆಳವಣಿಗೆ , ಶಾಲೆ , ಆಸ್ಪತ್ರೆ ಗಳ ನಿಮಾ೯ಣಕ್ಕೆ ನೆರವಾಗಿದ್ದರು. ಈ ಭಾಗದ ಜನರ ಕೋರಿಕೆಯಂತೆ ಹೇಮಾವತಿ ನದಿಗೆ ಹೇಮಗಿರಿಯ ಬಳಿಯಲ್ಲಿ ಒಡ್ಡನ್ನು ( ಅಣೆ ) ನಿಮಿ೯ಸಿ ರೈತರ ನೆರವಿಗೆ ಬಂದು ತಮ್ಮ ಕೊಡುಗೆ ಯನ್ನು ನೀಡಿರುತ್ತಾರೆ. ಇದರಿಂದ ಕಿಕ್ಕೇರಿ ಮತ್ತು ಅಕ್ಕಿಹೆಬ್ಬಾಳು ಬಯಲಿನ ಕೃಷಿ ಪ್ರದೇಶಗಳು ಅಚ್ಚುಕಟ್ಟಾದವು. ಅದಲ್ಲದೇ ನಾಲೆಯನ್ನು ನಿಮಾ೯ಣಗೊಳಿಸಿದ್ದರಿಂದ ಆ ಪ್ರದೇಶದಲ್ಲಿನ ರೈತರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗಿರು ತ್ತದೆ ಹಾಗೂ ಇಂದಿಗೂ ಕೂಡ ಈ ಪ್ರದೇಶಗಳು ಭತ್ತದ ಕಣಜವು ಆಗಿರುತ್ತವೆ.
ಸಾಹಿತ್ಯ – ಸಂಸ್ಕೃತಿ ಹಾಗೂ ಕಲೆಗಳ ಮಹಾ ಪೋಷಕರಾಗಿದ್ದ ಮೈಸೂರು ಮಹಾರಾಜರು ಗಳು ತಾಲ್ಲೂಕಿನ ಸಾಹಿತಿಗಳು – ಕಲಾವಿದ ರುಗಳಿಗೆ ತಕ್ಕ ಪ್ರೋತ್ಸಾಹವನ್ನು ನೀಡಿದಂತೆ, ಅವರನ್ನು ಸೂಕ್ತವಾಗಿ ಗೌರವಿಸುತ್ತಿದ್ದರು.
ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಇವರೆಲ್ಲರುಗಳು ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ , ಮಲ್ಕೋಲಹಳ್ಳಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ , ಕಲ್ಲಹಳ್ಳಿಯ ಶ್ರೀ ಭೂವರಾಹ ನಾಥಸ್ವಾಮಿ , ಬೆಟ್ಟದ ಹೊಸೂರಿನ ಶ್ರೀ ಬೋಳಾರೆ ರಂಗನಾಥಸ್ವಾಮಿ ಮತ್ತು ಹೊಸಹೊಳಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಇನ್ನೂ ಮುಂತಾದ ದೇವಾಲಯ ಗಳಿಗೆ ಆಗಾಗ್ಗೆ ಬಂದಿರುವುದರ ಬಗ್ಗೆ ಉಲ್ಲೇ ಖಿತವು ಇತಿಹಾಸದಲ್ಲಿ ದೊರೆಯುತ್ತದೆ.
ಕಾಪನಹಳ್ಳಿಯಲ್ಲಿನ ಶ್ರೀ ಸ್ವತಂತ್ರ ಸಿದ್ಧ ಲಿಂಗೇಶ್ವರರ ತಪೋಕ್ಷೇತ್ರದ ಶ್ರೀ ಗವಿ ಮಠಕ್ಕೆ ದೇಣಿಗೆ ಮತ್ತು ಭೂದಾನವನ್ನು ಮಾಡಿರುತ್ತಾರೆ. ಹೊಸಹೊಳಲಿನ ಶ್ರೀ ಸಿಂಗಮ್ಮ ದೇವಿಯ ಪ್ರಬಾವ ಹಾಗೂ ಪವಾಡದಿಂದ ಬೆರಗಾಗಿದ್ದಂತಹ ಮಹಾ ರಾಜರ ಕುಟುಂಬವು ದೇವಿಗೆ ಸೀರೆ – ಒಡವೆಗಳು ಸೇರಿದಂತೆ ಹರಕೆ ಸಮಪ೯ಣೆ ಮಾಡಿ , ಪೂಜೆಯನ್ನು ಸಲ್ಲಿಸಿದ್ದರು. ಹೇಮಗಿರಿಯಲ್ಲಿ ದನಗಳ ಜಾತ್ರೆ ಮತ್ತು ರಥಸಪ್ತಮಿಯ ದಿನದಂದು ರಥೋತ್ಸವವನ್ನು ಪ್ರತಿವಷ೯ವೂ ಕೂಡ ತಪ್ಪದೇ ನಡೆಸಲು ತಮ್ಮ ಸಹಾಯವನ್ನು ನೀಡುತ್ತಿದ್ದರು ಹಾಗೂ ದಾಸೋಹಕ್ಕಾಗಿ ಭೂದಾನವನ್ನು ಮಾಡಿದ್ದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಲಘಟ್ಟದಲ್ಲಿ ಅವರೇ ಸ್ಥಾಪಿಸಿದ್ದಂತಹ ಪ್ರಜಾಪ್ರತಿನಿಧಿ ಸಭೆಗೆ ( ಪ್ರಸ್ತುತದಲ್ಲಿನ ವಿಧಾನ ಪರಿಷತ್ತಿನ ಸ್ವರೂಪದ್ದು ಆಗಿರುತ್ತದೆ ) ಈ ಭಾಗದ ಹಲವು ಮುಖಂಡರನ್ನು ಸದಸ್ಯರನ್ನಾಗಿ ನೇಮಿಸಿಕೊಂಡಿದ್ದರು. ಅದರಂತೆ , ಸುಮಾರು ಇಪ್ಪತ್ತೈದು(25) ಮಂದಿ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರು ಆಗಿದ್ದರು. ಅದರಲ್ಲಿ ಹೊಸಹೊಳಲಿನ ಸಾಹುಕಾರ್ ದುಂಡುಶೆಟ್ಟರು , ಶೀಳನೆರೆಯ ಪಟೇಲ್ ಲಿಂಗೇಗೌಡರು , ಶೀಳನೆರೆಯ ಸಾಹುಕಾರ್ ಎಸ್. ಟಿ ತಮ್ಮಣ್ಢಗೌಡರು , ಕೆ. ಆರ್ ಪೇಟೆಯ ನಂಜಪ್ಪ ನಾಡಿಗರು , ಅಕ್ಕಿ ಹೆಬ್ಬಾಳಿನ ಪಟೇಲ್ ಲಿಂಗೇಗೌಡರು , ಮಡುವಿನಕೋಡಿಯ ಎಸ್. ಕೆ ಸಿದ್ದೇಗೌ ಡರು ಮತ್ತು ಸಿಂಧುಘಟ್ಟದ ಎಸ್. ಕೆ ಸುಬ್ಬೇಗೌಡರು ಇನ್ನೂ ಮುಂತಾದವರು ಗಳು ಬಹಳ ಪ್ರಮುಖ ಅಗ್ರಗಣ್ಯರಾ ದಂತೆ , ಆ ಸಂಬಂಧಿತ ತಮ್ಮ ಕೆಲಸ – ಕಾಯ೯ಗಳನ್ನು ನಿವ೯ಹಿಸಿರುತ್ತಾರೆ.
———————————————————- ಮಾಹಿತಿಗಳ ಸಂಗ್ರಹ ಮತ್ತು ಲೇಖನ :
ವಿ. ಪಿ ಆರಾಧ್ಯ – ಮೈಸೂರು
———————————————————-