Home > Articles posted by Editor VandeKarnataka
FEATURE
on Jan 24, 2026
5792 views 50 secs

ದೃಷ್ಟಿಹೀನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಮತ್ತು ಅವರ ಸ್ವಾವಲಂಬನೆಯನ್ನು ಹೆಚ್ಚಿಸಲು ನಾರಾಯಣ ನೇತ್ರಾಲಯದ ‘ಬಡ್ಸ್ ಟು ಬ್ಲಾಸಮ್ಸ್’ (Buds to Blossoms) ವಿಭಾಗವು, ‘SHG ಟೆಕ್ನಾಲಜೀಸ್’ ಸಹಯೋಗದೊಂದಿಗೆ ‘ಸ್ಮಾರ್ಟ್ ವಿಷನ್ ಗ್ಲಾಸಸ್ ಅಲ್ಟ್ರಾ’ (Smart Vision Glasses Ultra) ಎಂಬ ಅತ್ಯಾಧುನಿಕ ಸ್ಮಾರ್ಟ್ ಕನ್ನಡಕವನ್ನು ಅಭಿವೃದ್ಧಿಪಡಿಸಿದೆ.ಸಾಮಾನ್ಯ ಕನ್ನಡಕದಂತೆ ಆಕರ್ಷಕ ವಿನ್ಯಾಸ ಹೊಂದಿರುವ ಈ ಸಾಧನವು ಕೇವಲ ಫ್ಯಾಷನ್ ಗಾಗಿ ಅಲ್ಲ, ಬದಲಿಗೆ ಇದೊಂದು ಕೃತಕ ಬುದ್ಧಿಮತ್ತೆಯಿಂದ (Artificial Intelligence – AI) ಚಾಲಿತವಾಗಿರುವ ಶಕ್ತಿಶಾಲಿ ಸಹಾಯಕ […]

FEATURE
on Jan 21, 2026
5791 views 36 secs

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಪ್ರಸಿದ್ಧ ಗಗನಯಾತ್ರಿ, ಬಾಹ್ಯಾಕಾಶದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಭಾರತದ ಹೆಮ್ಮೆಯ ಪುತ್ರಿ ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತರಾಗುವ ಮೂಲಕ ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಹೆಸರುಗಳಲ್ಲಿ ತಮ್ಮನ್ನು ತಾವು ಸೇರಿಸಿಕೊಂಡ ಐತಿಹಾಸಿಕ 27 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ.  ನಾಸಾ, ಡಿಸೆಂಬರ್ 27, 2025 ರಿಂದ ಜಾರಿಗೆ ಬರುವಂತೆ ಹೆಸರಾಂತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ನಿವೃತ್ತಿಯನ್ನು ಘೋಷಿಸಿದೆ. ಜನವರಿ 20(ಮಂಗಳವಾರ), 2026 ರಂದು ಬಿಡುಗಡೆಯಾದ ಮಾಹಿತಿಯಲ್ಲಿ ಈ ಬಗ್ಗೆ ತಿಳಿದುಬಂದಿದೆ.ನನಗೆ […]

FEATURE
on Jan 17, 2026
5786 views 29 secs

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೂಲಿ ಚಿತ್ರ ನಿರ್ದೇಶನ ಮಾಡಿದ್ದ ಕಾಲಿವುಡ್‍ನ ಯಶಸ್ಸಿ ನಿರ್ದೇಶಕ ಲೋಕೇಶ್ ಕನಕರಾಜು ಇದೀಗ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ಧಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ, ನಿರೀಕ್ಷೆ ಹೆಚ್ಚು ಮಾಡಿದೆ ಕಳೆದ ವರ್ಷ ಲೋಕೇಶ್ ಕನಕರಾಜ್ ರಜಿನಿಕಾಂತ್ ಅವರ ಜತೆ ‘ಕೂಲಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಹುತಾರಾಗಣದ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಾಣದಿದ್ದರೂ ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಗಳಿಕೆ […]

FEATURE
on Jan 10, 2026
5779 views 19 secs

ಹಿರಿಯ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ ಅವರು ಅನಾರೋಗ್ಯದಿಂದ ಪುಣೆಯ  ಆಸ್ಪತ್ರೆಯಲ್ಲಿ ನಿಧನರಾದರು. 1942 ಮೇ 24 ರಂದು ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪಡೆದು 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.ಭಾರತಕ್ಕೆ […]

FEATURE
on Jan 10, 2026
5789 views 24 secs

ಇತ್ತೀಚಿನ ಸಮಕಾಲೀನ ಬರಹಗಾರ್ತಿಯರಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ‘ಆಶಾ ರಘು’ ಅವರು ಕೇವಲ ತಮ್ಮ 47ನೇ ವಯಸ್ಸಿನಲ್ಲಿ ಅಕಾಲಿಕ ನಿಧನರಾಗಿದ್ದಾರೆ. ಆಶಾ ಅವರ ಪತಿ ರಘು ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ರಘು ಅವರು ಕರ್ನಾಟಕದ ಖ್ಯಾತ ಆಹಾರ ತಜ್ಞರಾಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್‌ ಉಂಟಾಗಿತ್ತು. ರಘು ಕನಸಿನಲ್ಲಿ ಬಂದರು ಎಂದು ಅವರು ಪೋಸ್ಟ್‌ ಹಾಕಿದ್ದರು, ಇವರಿಗೆ ಓರ್ವ ಮಗಳಿದ್ದಾಳೆ.ಜೂನ್ 18 1979, ಆಶಾ ರಘು ಅವರ ಜನ್ಮದಿನ. ತಂದೆ ಕೇಶವ ಅಯ್ಯಂಗಾರ್. ತಾಯಿ ಸುಲೋಚನ. […]

FEATURE
on Jan 8, 2026
5774 views 0 secs

ಎಲ್ಲರೂ ಭಾರೀ ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಕೆಜಿಎಫ್ 2 ಬಳಿಕ ಟಾಕ್ಸಿಕ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಯಶ್, ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.ಮಲಯಾಳಂನ ಖ್ಯಾತ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಮೂಲಕ ಯಶ್ ಮತ್ತೊಮ್ಮೆ ವರ್ಲ್ಡ್ ಸಿನೆಮಾ ಕಬ್ಜಾ ಮಾಡಲು ಸಜ್ಜಾಗಿದ್ದಾರೆ. ಜನವರಿ 7ರಂದು ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದ ತಂಡ, ಹೇಳಿದಂತೆ ಯಶ್ ಬರ್ತ್‌ಡೇ ದಿನವೇ […]

FEATURE
on Dec 11, 2025
5751 views 59 secs

As with the ease of booking tickets and improvements in the speed of the train and passenger amenities, the response level of the railway staff has become better.On Wednesday night, Vande Karnataka magazine sent a message on its ‘X’ (formerly Twitter) social media account about liquor consumption by a few passengers in the Solapur-Hassan Express […]

FEATURE
on Nov 25, 2025
5776 views 30 secs

ಭಾರತ ಸಂವಿಧಾನದ ರಚನೆಯಲ್ಲಿ ಬಹುಪ್ರಮುಖವಾದಂತೆ , ತನ್ನ ಪ್ರಧಾನ ವಾದ ಹಾಗೂ ಮಹತ್ವದ ಪಾತ್ರವನ್ನು ನಿವ೯ಹಿಸಿದ ‌‌ವ್ಯಕ್ತಿ , ಹೆಮ್ಮೆಯ ಕನ್ನಡಿಗ ರಾದ ಸರ್ ಬಿ. ಎನ್ ರಾವ್ ಅವರ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿರುವುದಿಲ್ಲ. ಸರ್ ಬಿ. ಎನ್ ರಾವ್ ಅವರ ಹಿನ್ನೆಲೆಗಳು :ಇವರ ಹೆಸರಿನಲ್ಲಿರುವ ‘ ಬಿ ‘ ಎಂದರೆ ‘ ಬೆನಗಲ್ ‘ ಎಂದು ಮತ್ತು ‘ ಎನ್ ‘ ಎಂದರೆ ‘ ನರಸಿಂಗ ‘ ಎಂದು ಹಾಗೂ ಅದರಂತೆ , ಇವರ […]

FEATURE
on Sep 29, 2025
5760 views 9 secs

ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಒಂದು ದೊಡ್ಡ ಆಘಾತ ಎದುರಾಗಿದೆ. ರಾಜ್ಯದ ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು (ಸೆಪ್ಟೆಂಬರ್ 29) ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರ ಸಾವು ಸಾಕಷ್ಟು ದುಃಖ ತಂದಿದೆ. ಅವರಿಗೆ ತೀವ್ರ ಹೃದಯಾಘಾತ ಉಂಟಾಯಿತು ಎಂದು ತಿಳಿದು ಬಂದಿದೆ. ಅವರಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಅವರನ್ನು ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅವರ ಸಾವಿಗೆ ಅನೇಕರು […]

FEATURE
on Sep 25, 2025
5766 views 2 secs

ಕನ್ನಡ ಸಾಹಿತ್ಯಿಕ ಸಾಧನೆಯಿಂದಲೇ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ(94) ಅವರು ವಿಧಿವಶರಾಗಿದ್ದಾರೆ.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೈರಪ್ಪ ಅವರು, ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಕನ್ನಡ ಸಾಹಿತ್ಯದ ಸೇವೆಯಲ್ಲಿ ಸದಾ ಮುಂದಿರುತ್ತಿದ್ದ ಭೈರಪ್ಪ ಅವರ ಬರಹಗಳನ್ನು ಓದುವವರ ಸಾಲಿನಲ್ಲಿ ಹೊಸ ಯುಗದ ನವ ಯುವಕರೇ ಹೆಚ್ಚಾಗಿದ್ದರು. ಅವರ ಪ್ರಸಿದ್ಧ ಕೃತಿಗಳನ್ನು ಈಗಲೂ ಹಲವು ಯುವಜನರಿಗೆ ಮೊದಲ […]